ಶುಕ್ರವಾರ, 21 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಟಾಟಾ ಸ್ಟೀಲ್ ಕಾರ್ಖಾನೆಯಲ್ಲಿ ಆವಿ ಸೋರಿಕೆ; 19 ಮಂದಿಗೆ ಸುಟ್ಟ ಗಾಯ

Published 13 ಜೂನ್ 2023, 14:17 IST
Last Updated 13 ಜೂನ್ 2023, 14:17 IST
ಅಕ್ಷರ ಗಾತ್ರ

ಭುವನೇಶ್ವರ: ಒಡಿಶಾದ ಮೇರಮುಂಡಲಿ ಉಕ್ಕು ಕಾರ್ಖಾನೆಯಲ್ಲಿ ಆವಿ ಸೋರಿಕೆಯಾಗಿ 19 ಮಂದಿಗೆ ಸುಟ್ಟ ಗಾಯಗಳಾಗಿವೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ಗಾಯಾಳುಗಳನ್ನು ತಕ್ಷಣವೇ ಕಟಕ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು.

ಕಾರ್ಖಾನೆಯಲ್ಲಿ ಊದುಕುಲುಮೆ ಪರಿಶೀಲಿಸುತ್ತಿದ್ದ ಕಾರ್ಮಿಕರು ಹಾಗೂ ಎಂಜಿನಿಯರ್‌ಗಳು ಗಾಯಗೊಂಡಿದ್ದಾರೆ ಎಂದು ಢೆಂಕನಾಲ್ ಎಸ್‌ಪಿ ಜ್ಞಾನರಂಜನ್ ಮೋಹಪಾತ್ರ ತಿಳಿಸಿದ್ದಾರೆ.

ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಅವಘಡ ಸಂಭವಿಸಿದೆ ಎಂದು ಟಾಟಾ ಸ್ಟೀಲ್, ಪ್ರಕಟಣೆ ತಿಳಿಸಿದೆ.

ಅವಘಡದ ಹಿಂದಿನ ಕಾರಣ ತಿಳಿಯಲು ಆಂತರಿಕ ತನಿಖೆಗೆ ನಿರ್ದೇಶಿಸಲಾಗಿದೆ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT