ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಿಮಾಚಲ ಪ್ರದೇಶ |ಭೂಕುಸಿತದಿಂದಾಗಿ ದೇಗುಲದಲ್ಲಿ ಕಾಲ್ತುಳಿತ: 2ಸಾವು, 7ಮಂದಿಗೆ ಗಾಯ

Published : 25 ಮಾರ್ಚ್ 2024, 13:46 IST
Last Updated : 25 ಮಾರ್ಚ್ 2024, 13:46 IST
ಫಾಲೋ ಮಾಡಿ
Comments

ಊನಾ: ಹಿಮಾಚಲ ಪ್ರದೇಶದ ಉನಾ ಜಿಲ್ಲೆಯಲ್ಲಿ ಸೋಮವಾರ ಭೂಕುಸಿತದಿಂದಾಗಿ ದೇಗುಲದಲ್ಲಿ ಕಾಲ್ತುಳಿತ ಸಂಭವಿಸಿ ಇಬ್ಬರು ಭಕ್ತರು ಮೃತಪಟ್ಟು, 7 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಂಬ ಉಪವಿಭಾಗದ ಮೈರಿ ಗ್ರಾಮದಲ್ಲಿರುವ ಡೇರಾ ಬಾಬಾ ವಡ್‌ಭಾಗ್‌ ಸಿಂಗ್ ದೇವಸ್ಥಾನದಲ್ಲಿ ಈ ಘಟನೆ ನಡೆದಿದೆ. ಮೃತರನ್ನು ಪಂಜಾಬ್‌ನ ಫರೀದ್‌ಕೋಟ್ ನಿವಾಸಿಗಳಾದ ಬಿಲ್ಲಾ ಮತ್ತು ಬಲ್ವೀರ್ ಚಂದ್ ಎಂದು ಗುರುತಿಸಲಾಗಿದೆ.

ಇಂದು (ಸೋಮವಾರ) ಬಾಬಾ ವಡ್‌ಭಾಗ್‌ ಸಿಂಗ್ ಜಾತ್ರೆಯಲ್ಲಿ ಪಾಲ್ಗೊಳ್ಳಲು ಬಂದಿದ್ದ ಭಕ್ತರು ಮುಂಜಾನೆ 5 ಗಂಟೆ ಸುಮಾರಿಗೆ ಚರಣ ಗಂಗಾ ಸ್ನಾನ ಮಾಡುತ್ತಿದ್ದಾಗ ಭೂಕುಸಿತ ಸಂಭವಿದೆ. ಈ ವೇಳೆ ನಾಲ್ಕೈದು ದೊಡ್ಡ ಕಲ್ಲುಗಳು ಪರ್ವತದಿಂದ ಜಾರಿ ಕೆಳಗೆ ಬಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.

ಚರಣ ಗಂಗಾ ಸ್ನಾನವನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ. ಸೋಮವಾರದ ಹುಣ್ಣಿಮೆಯ ಕಾರಣ, ಈ ಪ್ರದೇಶದಲ್ಲಿ ಸಾಕಷ್ಟು ಜನಸಂದಣಿ ಇತ್ತು.

ಪರ್ವತದಿಂದ ಕಲ್ಲುಗಳು ಉರುಳುತ್ತಿರುವುದನ್ನು ನೋಡಿದ ಜನರು ಅಲ್ಲಿ ಓಡಲು ಪ್ರಾರಂಭಿಸಿದರು. ಇದರಿಂದ ಕಾಲ್ತುಳಿತ ಸಂಭವಿಸಿತು. ಘಟನೆಯಲ್ಲಿ 9 ಮಂದಿ ಭಕ್ತರು ಗಾಯಗೊಂಡರು. ಎಲ್ಲಾ ಗಾಯಾಳುಗಳನ್ನು ಚಿಕಿತ್ಸೆಗಾಗಿ ಸಿವಿಲ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅವರಲ್ಲಿ ಇಬ್ಬರು ಭಕ್ತರು ಮೃತಪಟ್ಟಿದ್ದಾರೆ.

ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಗಾಯಗೊಂಡವರಲ್ಲಿ ಐವರನ್ನು ಊನಾ ವಲಯ ಆಸ್ಪತ್ರೆಗೆ ಕಳುಹಿಸಲಾಗಿದ್ದು, ಇಬ್ಬರನ್ನು ಚಂಡೀಗಢಕ್ಕೆ ಕಳುಹಿಸಲಾಗಿದೆ ಎಂದು ಎಎಸ್‌ಪಿ ಸಂಜೀವ್ ಭಾಟಿಯಾ ತಿಳಿಸಿದ್ದಾರೆ.

ಪರಿಸ್ಥಿತಿ ಸಹಜವಾಗುವವರೆಗೆ ಗಂಗಾನದಿಯಲ್ಲಿ ಪುಣ್ಯಸ್ನಾನಕ್ಕೆ ಭಕ್ತರಿಗೆ ಅವಕಾಶ ನೀಡುವುದಿಲ್ಲ ಎಂದು ಊನಾ ಉಪ ಆಯುಕ್ತ ಜತಿನ್ ಲಾಲ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT