ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಸ್ಥಾನದ ನೂತನ ಶಾಸಕರಲ್ಲಿ ಶೇ 22 ಜನರು ಅಪರಾಧ ಪ್ರಕರಣಗಳಲ್ಲಿ ಭಾಗಿ

Published 5 ಡಿಸೆಂಬರ್ 2023, 16:11 IST
Last Updated 5 ಡಿಸೆಂಬರ್ 2023, 16:11 IST
ಅಕ್ಷರ ಗಾತ್ರ

ಜೈಪುರ: ರಾಜಸ್ಥಾನ ವಿಧಾನಸಭೆಗೆ ನೂತನವಾಗಿ ಚುನಾಯಿತರಾದ ಶಾಸಕರಲ್ಲಿ ಕನಿಷ್ಠ ಶೇ 22ರಷ್ಟು ಜನ ಗಂಭೀರ ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿದ್ದಾರೆ.

2018ರ ವಿಧಾನಸಭೆ ಚುನಾವಣೆಗೆ ಹೋಲಿಸಿದರೆ, ಕ್ರಿಮಿನಲ್ ಮೊಕದ್ದಮೆಗಳನ್ನು ಹೊಂದಿರುವ ಶಾಸಕರ ಸಂಖ್ಯೆಯಲ್ಲಿ ಶೇ 8ರಷ್ಟು ಹೆಚ್ಚಳವಾಗಿದೆ.

ರಾಜಸ್ಥಾನದಲ್ಲಿ ನವೆಂಬರ್‌ 25ರಂದು ಚುನಾವಣೆ ನಡೆದಿತ್ತು. ಡಿ. 3ರಂದು ನಡೆದ ಮತ ಎಣಿಕೆಯಲ್ಲಿ ಬಿಜೆಪಿ 115 ಸ್ಥಾನಗಳನ್ನು ಗೆದ್ದು, ಅಧಿಕಾರದ ಗದ್ದುಗೆ ಏರಿದೆ. ಕಾಂಗ್ರೆಸ್‌ 69 ಸ್ಥಾನ ಗಳಿಸುವಲ್ಲಿ ಸಫಲವಾಗಿದೆ.

ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ 48 ಮಹಿಳೆಯರಲ್ಲಿ ಇಬ್ಬರು ಪಕ್ಷೇತರ, ಬಿಜೆಪಿ ಮತ್ತು ಕಾಂಗ್ರೆಸ್‌ನಿಂದ ತಲಾ 9ರಂತೆ 20 ಮಹಿಳಾ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.

ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ವರದಿ ಪ್ರಕಾರ, ವಿಧಾನಸಭೆಯ 199 ಚುನಾಯಿತ ಅಭ್ಯರ್ಥಿಗಳಲ್ಲಿ 44 ಶಾಸಕರ ಹೆಸರಿನಲ್ಲಿ ಅಪರಾಧ ಮೊಕದ್ದಮೆಗಳು ದಾಖಲಾಗಿವೆ.

ಕಾಂಗ್ರೆಸ್ ಅಭ್ಯರ್ಥಿ ಗುರ್ಮೀತ್ ಸಿಂಗ್ ಕೂನರ್ ಅವರ ದಿಢೀರ್‌ ನಿಧನದಿಂದಾಗಿ ಕರಣ್‌ಪುರ ಕ್ಷೇತ್ರದ ಚುನಾವಣೆಯನ್ನು ಮುಂದೂಡಲಾಗಿದೆ.

2018ರ ವಿಧಾನಸಭೆಯ ಒಟ್ಟು 199 ಶಾಸಕರ ಪೈಕಿ ಶೇ14ರಷ್ಟು ಅಂದರೆ 28 ಶಾಸಕರ ವಿರುದ್ಧ ಚುನಾವಣಾ ಅಫಿದವಿತ್‌ನಲ್ಲಿ ಗಂಭೀರ ಅಪರಾಧ ಪ್ರಕರಣಗಳಿದ್ದವು.

ರಾಜಸ್ಥಾನ ನೂತನ ಶಾಸಕರಲ್ಲಿ ಕನಿಷ್ಠ 6 ಮಂದಿ ಮಹಿಳೆಯರ ವಿರುದ್ಧ ಅಪರಾಧ ಸಂಬಂಧಿ ಪ್ರಕರಣಗಳಿವೆ. ಹಾಗೆಯೇ ಒಬ್ಬ ಶಾಸಕರಾದರೂ ಕೊಲೆ ಆರೋಪದಲ್ಲಿ ಭಾಗಿಯಾಗಿದ್ದಾರೆ.

ಗೆದ್ದ ಅಭ್ಯರ್ಥಿಗಳಿಗೆ ಸಂಬಂಧಿಸಿದ ಅಪರಾಧ ಹಿನ್ನೆಲೆ, ಹಣಕಾಸು, ಶಿಕ್ಷಣ ಮತ್ತು ಲಿಂಗ ಸಂಬಂಧಿತ ವಿವರಗಳ ವಿಶ್ಲೇಷಣೆಯ ವರದಿ ಎಡಿಆರ್ ಬಳಿಯಿದೆ.

ಬಿಜೆಪಿಯಲ್ಲಿ 115 ರ ಪೈಕಿ ಶೇ 21ರಷ್ಟು ಮಂದಿ, ಕಾಂಗ್ರೆಸ್‌ 69ರ ಪೈಕಿ 16 ಶಾಸಕರ ಗಂಭೀರ ಕ್ರಿಮಿನಲ್ ಮೊಕದ್ದಮೆಗಳಿವೆ.

2018ಕ್ಕೆ ಹೋಲಿಸಿದರೆ, ಶಾಸಕರ ಅಪರಾಧ ಪ್ರಕರಣಗಳು ಬಿಜೆಪಿ 35ರಿಂದ 30ಕ್ಕೆ ಮತ್ತು ಕಾಂಗ್ರೆಸ್‌ 29 ರಿಂದ 20 ಕ್ಕೆ ಇಳಿದಿದೆ

ಹಾಗೆಯೇ 2018ರಲ್ಲಿ 158 ಶಾಸಕರು ಕೋಟ್ಯಧಿಪತಿಗಳಾಗಿದ್ದರು. ಈ ಸಂಖ್ಯೆ ಈ ಬಾರಿ 199 ಶಾಸಕರ ಪೈಕಿ 85 ಪ್ರತಿಶತದಷ್ಟಾಗಿದೆ.

ಬಿಜೆಪಿಯಲ್ಲಿ 115 ಶಾಸಕರ ಪೈಕಿ 101 ಮಂದಿ, ಕಾಂಗ್ರೆಸ್‌ಲ್ಲಿ 69ರ ಪೈಕಿ 58 ಮಂದಿ ಕೋಟ್ಯಧಿಪತಿಗಳಿದ್ದಾರೆ.

ಹನುಮನಗರ್‌ ಶಾಸಕ ಅಭಿಮನ್ಯು ಕೇವಲ ₹1,570,94 ಗಳ ಒಟ್ಟು ಆಸ್ತಿಯೊಂದಿಗೆ ಅತ್ಯಂತ ಕಡಿಮೆ ಆಸ್ತಿ ಹೊಂದಿರುವ ಶಾಸಕರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT