ಗುವಾಹಟಿ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಸಂಬಂಧಿಸಿದಂತೆ ಪಾಕಿಸ್ತಾನವನ್ನು ಸಮರ್ಥಿಸಿಕೊಂಡ ಅಸ್ಸಾಂನ 27 ಮಂದಿಯನ್ನು ಬಂಧಿಸಲಾಗಿದೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.

ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಶರ್ಮಾ, ರಾಷ್ಟ್ರ ವಿರೋಧಿ ಚಟುವಟಿಕೆಗಳನ್ನು ಸರ್ಮರ್ಥಿಸಿಕೊಂಡ ಆರೋಪದಡಿ ಇದುವರೆಗೂ 27 ಮಂದಿಯನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
.Pahalgam Attack: ಕಾಶ್ಮೀರದ ವಿವಿಧೆಡೆ ಕಾರ್ಯಾಚರಣೆ ತೀವ್ರಗೊಳಿಸಿದ ಭದ್ರತಾ ಪಡೆ.Pahalgam Attack | ಭದ್ರತೆ ಭೀತಿ; 48 ಪ್ರವಾಸಿ ತಾಣಗಳು ಬಂದ್.
ಬಂಧಿತರಲ್ಲಿ ವಿರೋಧ ಪಕ್ಷದ ಎಐಯುಡಿಎಫ್ ಶಾಸಕ ಅಮೀನುಲ್ ಇಸ್ಲಾಂ ಸಹ ಸೇರಿದ್ದಾರೆ. ಪಹಲ್ಗಾಮ್ ದಾಳಿಯಲ್ಲಿ ಪಾಕಿಸ್ತಾನ ಮತ್ತು ಅದರ ಸಹಭಾಗಿತ್ವವನ್ನು ಭಾರತದ ನೆಲದಲ್ಲಿ ಸಮರ್ಥಿಸಿಕೊಂಡ ಆರೋಪದಡಿ ಬಂಧಿತರ ವಿರುದ್ಧ ದೇಶದ್ರೋಹದ ಆರೋಪ ಹೊರಿಸಲಾಗಿದೆ. ಅಗತ್ಯವಿದ್ದಲ್ಲಿ ಬಂಧಿತರ ಮೇಲೆ ರಾಷ್ಟ್ರೀಯ ಭದ್ರತಾ ಕಾಯ್ದೆಯ ನಿಬಂಧನೆಗಳನ್ನು ವಿಧಿಸಲಾಗುವುದು ಎಂದೂ ಪೋಸ್ಟ್ನಲ್ಲಿ ಹೇಳಿದ್ದಾರೆ.

ಏಪ್ರಿಲ್ 22ರಂದು ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕರ ದಾಳಿಯಲ್ಲಿ 28 ಮಂದಿ ಮೃತಟ್ಟಿದ್ದರು. ಈ ಭೀಕರ ದಾಳಿಯನ್ನು ಇತರೆ ದೇಶದ ನಾಯಕರು ಖಂಡಿಸಿದ್ದಾರೆ.
.ತಿಪಟೂರು: ವಿದ್ಯುತ್ ಸ್ಪರ್ಶಿಸಿ ವ್ಯಕ್ತಿ, ಎರಡು ರಾಸು ಸಾವು.Pahalgam Terror Attack |ದೇಶದ ಭದ್ರತೆ ನಮ್ಮೆಲ್ಲರ ಜವಾಬ್ದಾರಿ: ಜಿ. ಪರಮೇಶ್ವರ.Pahalgam Attack: ಜಿಪ್ಲೈನ್ನಲ್ಲಿ ಪ್ರವಾಸಿಗ ಸವಾರಿ;ಸೆರೆಯಾಯ್ತು ಭಯಾನಕ ದೃಶ್ಯ.ವಿಶ್ವಸಂಸ್ಥೆ: ಭಯೋತ್ಪಾದನೆಗೆ ಹಾಲೆರೆಯುವ ಪುಂಡ ದೇಶ: ಪಾಕ್ ವಿರುದ್ಧ ಭಾರತ ಕಿಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.