ಮುಂಬೈ: ಅಂಧೇರಿಯ ರಸ್ತೆಯೊಂದರಲ್ಲಿ ಭಾನುವಾರ ಮುಂಜಾನೆ ಸೋರಿಕೆಯಾದ ಅನಿಲ ಪೈಪ್ಲೈನ್ನಲ್ಲಿ ಬೆಂಕಿ ಕಾಣಿಸಿಕೊಂಡು ಮೂವರಿಗೆ ಸುಟ್ಟ ಗಾಯಗಳಾಗಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಘಟನೆಯಲ್ಲಿ ಎರಡು ವಾಹನಗಳು ಹಾನಿಗೀಡಾಗಿವೆ.

ಜೆಸಿಬಿಯಿಂದ ಅನಧಿಕೃತವಾಗಿ ಅಗೆದಿದ್ದರಿಂದ ಪೈಪ್ಲೈನ್ ಹಾನಿಗೊಳಗಾಗಿದೆ ಎಂದು ಮಹಾನಗರ ಗ್ಯಾಸ್ ಲಿಮಿಟೆಡ್ (ಎಂಜಿಎಲ್) ತಿಳಿಸಿದೆ.

ಅಂಧೇರಿ (ಪೂರ್ವ) ಪ್ರದೇಶದ ತಕ್ಷಿಲಾದ ಗುರುದ್ವಾರದ ಬಳಿಯ ಶೇರ್-ಎ-ಪಂಜಾಬ್ ಸೊಸೈಟಿಯಲ್ಲಿ ರಸ್ತೆಯ ಮಧ್ಯದಲ್ಲಿ ಹಾದುಹೋಗುವ ಎಂಜಿಎಲ್ನ ಸರಬರಾಜು ಪೈಪ್ಲೈನ್ನಲ್ಲಿ ಸೋರಿಕೆಯುಂಟಾಗಿತ್ತು. ಬೆಳಗಿನ ಜಾವ 12.35 ಕ್ಕೆ ಬೆಂಕಿ ಕಾಣಿಸಿಕೊಂಡಿದೆ ಎಂದು ಅಗ್ನಿಶಾಮಕ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದ್ವಿಚಕ್ರ ವಾಹನ ಸವಾರ ಅರವಿಂದಕುಮಾರ್ ಕೈಥಲ್ಗೆ (21) ಶೇ 30 ರಿಂದ 40 ರಷ್ಟು, ಮತ್ತೊಬ್ಬ ಬೈಕ್ ಸವಾರ ಅಮನ್ ಹರಿಶಂಕರ್ ಸರೋಜ್ಗೆ (22) ಶೇ 40 ರಿಂದ 50 ರಷ್ಟು ಸುಟ್ಟ ಗಾಯ, ಆಟೋರಿಕ್ಷಾ ಚಾಲಕ ಸುರೇಶ್ ಕೈಲಾಸ್ ಗುಪ್ತಾ (52) ಶೇ 20 ರಷ್ಟು ಸುಟ್ಟ ಗಾಯಗಳಾಗಿವೆ.

ನೀರಿನ ಟ್ಯಾಂಕರ್, ಅಗ್ನಿಶಾಮಕ ವಾಹನ ಸ್ಥಳಕ್ಕೆ ಧಾವಿಸಿ ಬೆಳಗಿನ ಜಾವ 1.34 ರ ಹೊತ್ತಿಗೆ ಬೆಂಕಿಯನ್ನು ನಂದಿಸಿವೆ. ಗಾಯಗೊಂಡ ಮೂವರನ್ನು ಚಿಕಿತ್ಸೆಗಾಗಿ ಜೋಗೇಶ್ವರಿಯ ಬಾಲಾಸಾಹೇಬ್ ಠಾಕ್ರೆ ಟ್ರಾಮಾ ಕೇರ್ ಸೆಂಟರ್ಗೆ ಕರೆದೊಯ್ಯಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.