ಚಂಡೀಗಢ: ‘ಆಮ್ ಆದ್ಮಿ ಪಕ್ಷದ (ಎಎಪಿ) 32 ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ’ ಎಂದು ಪಂಜಾಬ್ನ ವಿರೋಧ ಪಕ್ಷದ ನಾಯಕ, ಕಾಂಗ್ರೆಸ್ನ ಪ್ರತಾಪ್ ಸಿಂಗ್ ಬಾಜವಾ ಅವರು ಸೋಮವಾರ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಎಎಪಿ, ‘ಬಾಜವಾ ಅವರೇ ಬಿಜೆಪಿ ಸೇರಲು ಮುಂಗಡವಾಗಿ ಸೀಟು ಕಾಯ್ದಿರಿಸಿದ್ದಾರೆ’ ಎಂದಿದೆ.

ಪಂಜಾಬ್ನಲ್ಲಿ ಎರಡು ದಿನಗಳ ಅಧಿವೇಶನ ನಡೆಯುತ್ತಿದ್ದು, ವಿಧಾನಸೌಧದ ಮುಂಭಾಗ ಬಾಜವಾ ಅವರು ಪತ್ರಕರ್ತರೊಂದಿಗೆ ಮಾತನಾಡಿದರು. ‘ಭಗವಂತ ಮಾನ್ ಅವರನ್ನು ಕೆಳಗಿಳಸಬೇಕು ಎಂದು ಕೇಜ್ರಿವಾಲ್ ಅವರು ನಿರ್ಧರಿಸಿದರೆ, ಮಾನ್ ಅವರು ಗಂಟುಮೂಟೆ ಕಟ್ಟಿಕೊಂಡು ಬಿಜೆಪಿ ಸೇರುತ್ತಾರೆ’ ಎಂದರು.

‘ನಮಗೆ ಸರ್ಕಾರ ಬೀಳಿಸುವ ಇರಾದೆ ಇಲ್ಲ. ಆದರೆ, 32 ಶಾಸಕರು ನನ್ನ ಸಂಪರ್ಕದಲ್ಲಿ ಇರುವುದು ನಿಜ. ಕೇವಲ ಶಾಸಕರಲ್ಲ, ಸಚಿವರೂ ನನ್ನ ಸಂಪರ್ಕದಲ್ಲಿ ಇದ್ದಾರೆ. ಎಎಪಿ ರಾಜ್ಯ ಘಟಕದ ಅಧ್ಯಕ್ಷ ಅಮರ್ ಅರೋರಾ ಅವರಿಗೆ ಈ ವಿಷಯ ತಿಳಿದಿದೆ. ನನ್ನ 45 ವರ್ಷದ ರಾಜಕೀಯ ಜೀವನದಲ್ಲಿ ನಾನೆಂದೂ ಸುಳ್ಳು ಹೇಳಿಲ್ಲ’ ಎಂದರು.

32 ಶಾಸಕರ ಪೈಕಿ ಯಾರನ್ನು ಸೇರಿಸಿಕೊಳ್ಳಬೇಕು ಯಾರಿಗೆ ಗೆಲ್ಲುವ ಸಾಮರ್ಥ್ಯ ಇದೆ ಎನ್ನುವುದನ್ನು ನೋಡಿಕೊಂಡು ಸೂಕ್ತ ಸಮಯದಲ್ಲಿ ಎಲ್ಲವನ್ನೂ ನಿರ್ಧರಿಸುತ್ತೇವೆ.
ಪ್ರತಾಪ್ ಸಿಂಗ್ ಬಾಜವಾ, ಕಾಂಗ್ರೆಸ್ ನಾಯಕ

ಬಾಜವಾ ಅವರು ಬಿಜೆಪಿ ಸೇರುವುದು ಖಚಿತ. ಅವರು ಇತ್ತೀಚೆಗೆ ಬೆಂಗಳೂರಿಗೆ ಹೋಗಿ ಯಾವ ಬಿಜೆಪಿ ನಾಯಕನನ್ನು ಭೇಟಿಯಾಗಿದ್ದಾರೆ ಎಂದು ರಾಹುಲ್ ಗಾಂಧಿ ಪ್ರಶ್ನಿಸಬೇಕು
ಅಮನ್ ಅರೋರಾ, ಎಎಪಿ ರಾಜ್ಯ ಘಟಕದ ಅಧ್ಯಕ್ಷ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.