ಗುರುಗ್ರಾಮ: ಇಲ್ಲಿನ ಸೆಕ್ಟರ್ 29ರಲ್ಲಿನ ಎರಡು ಕ್ಲಬ್ಗಳ ಹೊರಗೆ ನಡೆದಿದ್ದ ಕಚ್ಚಾ ಬಾಂಬ್ ದಾಳಿಗೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಡಿಸೆಂಬರ್ 10ರಂದು, ಗುರುಗ್ರಾಮದ ಸೆಕ್ಟರ್ 29ರಲ್ಲಿನ ಎರಡು ಕ್ಲಬ್ಗಳ ಹೊರಗೆ ಕಚ್ಚಾ ಬಾಂಬ್ಗಳನ್ನು ಎಸೆಯಲಾಗಿತ್ತು. ಘಟನೆ ಸಂಬಂಧ ಮೀರತ್ನ ನಿವಾಸಿ ಸಚಿನ್ ಎಂಬಾತನನ್ನು ಸ್ಥಳದಿಂದ ಬಂಧಿಸಲಾಯಿತು ಎಂದು ಪೊಲೀಸರು ಹೇಳಿದ್ದಾರೆ.

ಡಿಸೆಂಬರ್ 12ರಂದು ಪಾತಕಿ ರೋಹಿತ್ ಗೋದಾರಾ ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುವ ಮೂಲಕ ಚಂಡೀಗಢ ಮತ್ತು ಗುರುಗ್ರಾಮದಲ್ಲಿ ನಡೆದ ಎರಡೂ ಕಚ್ಚಾ ಬಾಂಬ್ ಸ್ಫೋಟದ ದಾಳಿಯ ಹೊಣೆಯನ್ನು ಹೊತ್ತುಕೊಂಡಿದ್ದಾನೆ.

ಪೊಲೀಸರು ಸಚಿನ್ ಅವರನ್ನು ನಗರ ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ಡಿಸೆಂಬರ್ 11ರಂದು ಏಳು ದಿನಗಳ ಪೊಲೀಸ್ ಕಸ್ಟಡಿಗೆ ತೆಗೆದುಕೊಂಡಿದ್ದರು.

ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ವಿನಿತ್ ಮಲಿಕ್, ವಿಕಾಸ್ ಮತ್ತು ಅಂಕಿತ್ ಎಂಬ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅವರನ್ನು ಆರು ದಿನಗಳ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಪ್ರಕರಣದಲ್ಲಿ ಬಂಧಿತರಾಗಿರುವ ಎಲ್ಲ ಆರೋಪಿಗಳನ್ನು ಕೂಲಂಕಷವಾಗಿ ವಿಚಾರಣೆ ನಡೆಸಲಾಗಿದೆ. ಆರೋಪಿಗಳ ಪೊಲೀಸ್ ಕಸ್ಟಡಿ ಅವಧಿ ಮಗಿದಿದ್ದು, ಅವರನ್ನು ನಗರ ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಸಹಾಯಕ ಪೊಲೀಸ್ ಆಯುಕ್ತ ವರುಣ್ ದಹಿಯಾ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.