ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಲ್ವಾಮಾ ದಾಳಿಗೆ 4 ವರ್ಷ: ಆ 'ಕರಾಳ ದಿನ' ನಡೆದಿದ್ದೇನು? ಇಲ್ಲಿದೆ ಮಾಹಿತಿ..

Last Updated 14 ಫೆಬ್ರುವರಿ 2023, 9:40 IST
ಅಕ್ಷರ ಗಾತ್ರ

ಪುಲ್ವಾಮಾ ಬಾಂಬ್‌ ಸ್ಫೋಟ ನಡೆದು ಇಂದಿಗೆ (ಫೆ.14) ನಾಲ್ಕು ವರ್ಷ. 40 ಜನ ಭಾರತೀಯ ವೀರ ಯೋಧರನ್ನು ಬಲಿ ತೆಗೆದುಕೊಂಡಿದ್ದ ಆ ಘಟನೆ ಭಾರತದ ಪಾಲಿಗೆ ಕಹಿನೆನಪು. ಆ ಕರಾಳ ದಿನದ ಕಹಿ ನೆನಪಿನ ಮಾಹಿತಿ ಇಲ್ಲಿದೆ...

***

ಅಂದು ಫೆಬ್ರುವರಿ 14, ಗುರುವಾರ, ಸಮಯ 3.15...

* ಜಮ್ಮು-ಶ್ರೀನಗರ ಹೆದ್ದಾರಿಯ ಪುಲ್ವಾಮದ ಅವಂತಿಪುರದಲ್ಲಿ ಪಾಕಿಸ್ತಾನದ ಜೈಷ್‌–ಇ– ಮೊಹಮ್ಮದ್‌ ಉಗ್ರ ಸಂಘಟನೆ ದಾಳಿ ಮಾಡಿತು.

* ಪುಲ್ವಾಮದ ಅವಂತಿಪುರ ಹೆದ್ದಾರಿಯಲ್ಲಿ ಒಟ್ಟು 70 ವಾಹನಗಳಲ್ಲಿ 2500 ಸಿಆರ್‌ಪಿಎಫ್ ಸಿಬ್ಬಂದಿ ಪ್ರಯಾಣಿಸುತ್ತಿದ್ದರು.

* 70 ವಾಹನಗಳು ಸರತಿ ಸಾಲಿನಲ್ಲಿ ತೆರಳುತ್ತಿದ್ದವು. ಈ ಸಾಲಿನಲ್ಲಿ ನಿರ್ದಿಷ್ಟ ಬಸ್‌ ಒಂದರ ಬಳಿಗೆ ಸ್ಫೋಟಕ ತುಂಬಿದ್ದ ಕಾರು ತರುವಲ್ಲಿ ಯಶಸ್ವಿಯಾಗಿದ್ದ ಉಗ್ರರು ಎರಡು ಬಸ್‌ಗಳನ್ನು ಸ್ಫೋಟಿಸಿದ್ದರು.

* ಜೈಷ್‌–ಇ– ಮೊಹಮ್ಮದ್‌ ಉಗ್ರರು ನಡೆಸಿದ್ದ ಬಾಂಬ್ ಸ್ಫೋಟದಲ್ಲಿ ಸಿಆರ್‌ಪಿಎಫ್‌ನ 40 ಯೋಧರು ಹುತಾತ್ಮರಾದರು.

* ಹುತಾತ್ಮ 40 ಸೈನಿಕರ ಪೈಕಿ ಉತ್ತರ ಪ್ರದೇಶದ 12 ಯೋಧರು, ರಾಜಸ್ತಾನದ 5, ಪಂಜಾಬ್ 4, ಪಶ್ಚಿಮ ಬಂಗಾಳ, ಒಡಿಶಾ, ಉತ್ತರಾಖಂಡ, ಬಿಹಾರ, ಮಹಾರಾಷ್ಟ್ರ, ತಮಿಳುನಾಡಿನ ತಲಾ ಇಬ್ಬರು ಹಾಗೂ ಅಸ್ಸಾಂ, ಕಾಶ್ಮೀರ, ಹಿಮಾಚಲ ಪ್ರದೇಶ, ಕೇರಳ, ಜಾರ್ಖಂಡ್, ಮಧ್ಯಪ್ರದೇಶ ಮತ್ತು ಕರ್ನಾಟಕದ ತಲಾ ಒಬ್ಬರು ಯೋಧರು ಹುತಾತ್ಮರಾಗಿದ್ದರು.

* ಮಂಡ್ಯದ ಮದ್ದೂರು ತಾಲೂಕಿನ ಗುಡಿಗೆರೆ ಗ್ರಾಮದ ಎಚ್.ಗುರು ಹುತಾತ್ಮನಾದ ಕರ್ನಾಟಕದ ಯೋಧ.

* ಉಗ್ರರು ಸ್ಫೋಟಕ್ಕೆ 350 ಕೆ.ಜಿ ಸ್ಪೋಟಕ ಬಳಸಿದ್ದರು. ಹಾಗೂ ಸ್ಕಾರ್ಪಿಯೊ ಕಾರು ಬಳಕೆ ಮಾಡಿದ್ದರು.

*ಪಾಕಿಸ್ತಾನದ ಜೈಷ್‌–ಇ– ಮೊಹಮ್ಮದ್‌ ಉಗ್ರ ಸಂಘಟನೆ ಈ ದಾಳಿಯ ಹೊಣೆ ಹೊತ್ತಿತ್ತು.

* ಜೈಷ್‌–ಇ– ಮೊಹಮ್ಮದ್‌ ಸಂಘಟನೆಯ ಸ್ಥಳೀಯ ಉಗ್ರ ಆದಿಲ್‌ ಅಹ್ಮದ್ ಆತ್ಮಾಹುತಿ ಬಾಂಬರ್‌ ಆಗಿದ್ದ. ಪುಲ್ವಾಮಾ ಜಿಲ್ಲೆಯ ಕಾಕಪೋರಾ ಮೂಲದ ಇವನು 2018ರಲ್ಲಿ ಜೈಷೆ ಸಂಘಟನೆ ಸೇರಿದ್ದ

* ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಭಾರತೀಯ ವಾಯುಪಡೆ ಫೆ.26ರಂದು ಪಾಕಿಸ್ತಾನದ ಬಾಲಾಕೋಟ್‌ನಲ್ಲಿದ್ದ ಉಗ್ರರ ನೆಲೆಗಳ ಮೇಲೆ ಬಾಂಬ್‌ ದಾಳಿ ನಡೆಸಿತ್ತು.

ಈ ಘಟನೆಯ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್‌ ಮಾಡಿ ಈ ಹೀನ ಕೃತ್ಯ ಸಹಿಸಲ್ಲ ಎಂದು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT