ನವದೆಹಲಿ: ನಮಗೆ ಯಾವ ರಾಜಕೀಯ ಪಕ್ಷಗಳ ಚುನಾವಣಾ ರ‍್ಯಾಲಿಗಳೂ ಬೇಡ ಎಂದು ಶೇ 41ರಷ್ಟು ಜನ ಅಭಿಪ್ರಾಯಪಟ್ಟಿರುವುದಾಗಿ ಸಮೀಕ್ಷೆಯೊಂದು ಹೇಳಿದೆ.

ಉತ್ತರ ಪ್ರದೇಶ, ಉತ್ತರಾಖಂಡ, ಗೋವಾ, ಪಂಜಾಬ್ ಮತ್ತು ಮಣಿಪುರದ ವಿಧಾನಸಭೆ ಚುನಾವಣೆಗಾಗಿ ಶನಿವಾರ ವೇಳಾಪಟ್ಟಿ ಪ್ರಕಟವಾಗಿದೆ. ಈ ಮಧ್ಯೆ ಶೇ 31 ರಷ್ಟು ನಾಗರಿಕರು ಚುನಾವಣೆಯನ್ನು ಮುಂದೂಡಬಹುದಾಗಿತ್ತು ಎಂದೂ ಅಭಿಪ್ರಾಯಪಟ್ಟಿದ್ದಾರೆ ಎಂದು ‘ಲೋಕಲ್ ಸರ್ಕಲ್ಸ್’ ಎಂಬ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಗೊತ್ತಾಗಿದೆ.

ಪಂಚ ರಾಜ್ಯಗಳಿಗೆ ಚುನಾವಣೆ ಘೋಷಣೆ ಮಾಡಿರುವ ಆಯೋಗವು, ಈ ರಾಜ್ಯಗಳಲ್ಲಿ ಜನವರಿ 15 ರವರೆಗೆ ಸಾರ್ವಜನಿಕ ರ‍್ಯಾಲಿಗಳು, ರೋಡ್‌ಶೋಗಳು, ಸಭೆಗಳನ್ನು ನಿಷೇಧಿಸಿದೆ ಮತ್ತು ಕಟ್ಟುನಿಟ್ಟಾದ ಸುರಕ್ಷತಾ ಮಾರ್ಗಸೂಚಿಗಳನ್ನು ಪಾಲಿಸಲು ಹೇಳಿದೆ.

ಚುನಾವಣೆಯ ಕಾರಣದಿಂದಾಗಿ ಕೋವಿಡ್ ಹರಡುವ ಅಪಾಯ ಕಡಿಮೆ, ಯಾವುದೇ ಕ್ರಮದ ಅಗತ್ಯವಿಲ್ಲ ಎಂದು ಶೇ. 4ರಷ್ಟು ಜನ ಅಭಿಪ್ರಾಯಪಟ್ಟಿದ್ದಾರೆ.

ದೇಶದ 309 ಜಿಲ್ಲೆಗಳ 11,000 ಕ್ಕೂ ಹೆಚ್ಚು ಜನರನ್ನು ಸಂಪರ್ಕಿಸಿ ಈ ಸಮೀಕ್ಷೆಯನ್ನು ಮಾಡಲಾಗಿದೆ. ಮತದಾನ ನಡೆಯುವ ಐದು ರಾಜ್ಯಗಳ 4,172 ಮಂದಿ ಇದರಲ್ಲಿ ಭಾಗವಹಿಸಿದ್ದಾರೆ. ಸಮೀಕ್ಷೆಯಲ್ಲಿ ಭಾಗವಹಿಸಿದವರ ಪೈಕಿ ಶೇ 68 ಮಂದಿ ಪುರುಷರಾಗಿದ್ದರೆ, ಶೇ 32 ಮಂದಿ ಮಹಿಳೆಯರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.