ತಿರುಪತಿ: ಇಲ್ಲಿನ ವೆಂಕಟೇಶ್ವರ ದೇವಾಲಯದ ಬೇರೆ ಬೇರೆ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿಂದೂಯೇತರ ಸಿಬ್ಬಂದಿ ವರ್ಗಾವಣೆಗೆ ತಿರುಮಲ ತಿರುಪತಿ ದೇವಸ್ಥಾನಮ್(ಟಿಟಿಡಿ) ಸಮಿತಿ ಚಿಂತಿಸಿದೆ.

ದೇವಾಲಯದಲ್ಲಿರುವ ಸುಮಾರು 44 ಕಾರ್ಯಕರ್ತರು ದೇವಾಲಯದ ಮಾರ್ಗದರ್ಶಿ ಸೂತ್ರಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿರುವ ಸಮಿತಿಯು ವರ್ಗಾವಣೆ ಬಗ್ಗೆ ಸಮಜಾಯಿಷಿ ನೀಡಿದೆ.

‘ಈ ಬಗ್ಗೆ ಸಮಿತಿಯು ಈಗಾಗಲೇ ಕಾರ್ಯಕರ್ತರಿಗೆ ನೋಟಿಸ್ ನೀಡಿದ್ದು, ವಿವರಣೆ ಕೇಳಿದ್ದೇವೆ’ ಎಂದು ಟಿಟಿಡಿ ಸಮಿತಿಯ ಕಾರ್ಯನಿರ್ವಾಹಕ ಅಧಿಕಾರಿ ಅನಿಲ್ ಕುಮಾರ್ ಸಿಂಘಾಲ್ ಹೇಳಿದ್ದಾರೆ.

ದೇವಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಟಿಟಿಡಿಯ ಮಹಿಳಾ ಸದಸ್ಯೆಯೊಬ್ಬರು ಪ್ರತಿದಿನ ಚರ್ಚ್‌ಗೆ ಹೋಗಿ ಪ್ರಾರ್ಥನೆ ಸಲ್ಲಿಸುತ್ತಿರುವ ಅಂಶ ಬಹಿರಂಗಗೊಂಡ ನಂತರ ಸಮಿತಿ ಈ ನಿರ್ಧಾರಕ್ಕೆ ಬಂದಿದೆ ಎಂದು ತಿಳಿದು ಬಂದಿದೆ.

’ದೇವಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರತಿಯೊಬ್ಬರು ತಿರು ನಾಮಮ್ ಹಾಕಬೇಕು ಎಂಬ ನಿಯಮವಿದೆ. ತಿರು ನಾಮಮ್ ಹಿಂದೂ ಸಂಸ್ಕೃತಿಯ ಸಂಕೇತವಾಗಿದೆ. ಹಿಂದೂ ಧರ್ಮದಲ್ಲಿ ನಂಬಿಕೆ ಇರುವವರು ಮಾತ್ರ ಇದನ್ನು ಹಾಕುತ್ತಾರೆ’ ಎಂದು ಟಿಟಿಡಿ ವಕ್ತಾರ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.