ಎಲೂರು: ಗೋದಾವರಿ ಜಿಲ್ಲೆಯ ಪೆಡವೆಗಿ ಮಂಡಲ್ ಪ್ರದೇಶದಲ್ಲಿರುವ ಭೋಗಪುರಂ ಕೊಳದಲ್ಲಿ ನಾಲ್ವರು ಎಂಜಿನಿಯರಿಂಗ್ ವಿದ್ಯಾರ್ಥಿಗಳು ಸಾವಿಗೀಡಾಗಿರುವ ಘಟನೆ ಶನಿವಾರ ಸಂಜೆ ನಡೆದಿದೆ. ಭಾನುವಾರ ಬೆಳಿಗ್ಗೆ ಕೊಳದಲ್ಲಿ ಒಂದು ಶವ ಕಾಣಿಸಿಕೊಂಡಿದ್ದರಿಂದ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.

ಸಾವಿಗೀಡಾದವರನ್ನು ಕೋಟಾ ಸಾಯ್, ಗುಮ್ಮಿ ಶಿವಶಂಕರ್ ಪರಶುರಾಮ್, ಜಿ. ವಿಜಯ್‌ಶಂಕರ್ ಹಾಗೂ ಕೆ.ಹರಿಕೃಷ್ಣ ರಾಜು ಎಂದು ಗುರುತಿಸಲಾಗಿದೆ.

‘ನಾಲ್ವರೂ ಬಿ ಟೆಕ್(ಮೆಕ್ಯಾನಿಕಲ್ ಎಂಜಿನಿಯರಿಂಗ್)ಪದವಿಯ 3ನೇ ವರ್ಷದ ವಿದ್ಯಾರ್ಥಿಗಳಾಗಿದ್ದು, ಎಲೂರಿನಲ್ಲಿರುವ ರಾಮಚಂದ್ರ ಇಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಶನಿವಾರ ಸಂಜೆ ಕಾಲೇಜು ಮುಗಿಸಿ ಭೋಗಪುರಂ ಕೊಳದ ಬಳಿ ತೆರಳಿದ್ದರು. ಈಜುವ ವೇಳೆ ಮುಳುಗಿ ಸಾವಿಗೀಡಾಗಿರಬಹುದು’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

‘ಸದ್ಯ ಶವಗಳನ್ನು ಹೊರತೆಗೆಯಲಾಗಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ತನಿಖೆ ಪ್ರಗತಿಯಲ್ಲಿದ್ದು, ಈ ಬಗ್ಗೆ ಮೃತರ ಕುಟುಂಬದವರಿಗೆ ಮಾಹಿತಿ ನೀಡಲಾಗಿದೆ’ ಎಂದೂ ಪೊಲೀಸರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.