ಪಿಟಿಐ

ಕಾಂಕೇರ್/ಸುಕ್ಮಾ: ದಂಡಕಾರಣ್ಯ ವಿಶೇಷ ವಲಯ ಸಮಿತಿಯ ಇಬ್ಬರು ಸದಸ್ಯರು ಸೇರಿದಂತೆ ಸುಮಾರು 77 ನಕ್ಸಲರು ಛತ್ತೀಸಗಢದ ಕಾಂಕೇರ್ ಹಾಗೂ ಸುಕ್ಮಾ ಜಿಲ್ಲೆಗಳಲ್ಲಿ ಬುಧವಾರ ಶರಣಾದರು. ಈ ನಕ್ಸಲರ ಪೈಕಿ 42 ಮಹಿಳೆಯರೂ ಇದ್ದಾರೆ.

ಮಂಗಳವಾರವಷ್ಟೇ ನಕ್ಸಲರ ಪ್ರಮುಖ ನಾಯಕ ಮಲ್ಲೋಜುಲಾ ವೇಣುಗೋಪಾಲ್ ರಾವ್ ಅಲಿಯಾಸ್ ಭೂಪತಿ ಅಥವಾ ಸೋನು ಮಹಾರಾಷ್ಟ್ರದ ಗಢಚಿರೋಲಿ ಜಿಲ್ಲೆಯಲ್ಲಿ ಶರಣಾಗಿದ್ದರು. ಇವರ ಜೊತೆ 60 ನಕ್ಸಲರೂ ಇದ್ದರು. ಇದು ನಕ್ಸಲ್ ಚಳವಳಿಯನ್ನು ಅಂತ್ಯಗೊಳಿಸುವ ಪ್ರಕ್ರಿಯೆಯಲ್ಲಿ ಸಾಧಿಸಿದ ಮೈಲಿಗಲ್ಲು ಎಂದೇ ಕರೆಯಲಾಗುತ್ತಿದೆ.

ಸುಕ್ಮಾ ಜಿಲ್ಲೆಯಲ್ಲಿ ಇಬ್ಬರು ಮಹಿಳೆಯರು ಸೇರಿ 27 ನಕ್ಸಲರು ಶರಣಾದರು. ತಮ್ಮ ಶಸ್ತ್ರಾಸ್ತ್ರಗಳನ್ನೂ ಒಪ್ಪಿಸಿದರು. ಇವರ ಪೈಕಿ 16 ನಕ್ಸಲರನ್ನು ಹುಡುಕಿಕೊಟ್ಟವರಿಗೆ ₹50 ಲಕ್ಷ ಬಹುಮಾನ ನೀಡುವುದಾಗಿ ಘೋಷಿಸಲಾಗಿತ್ತು. ಕಾಂಕೇರ್ನಲ್ಲಿ 50 ನಕ್ಸಲರು ಚಳವಳಿಯನ್ನು ತ್ಯಜಿಸಿದ್ದಾರೆ. ಇವರಲ್ಲಿ 32 ಮಹಿಳೆಯರು ಇದ್ದಾರೆ.

ಕಾಂಕೇರ್ ಜಿಲ್ಲೆಯಲ್ಲಿ ಮಹಾರಾಷ್ಟ್ರದ ಗಢಚಿರೋಲಿ ಜಿಲ್ಲೆಯ ಗಡಿಯಲ್ಲಿಯೇ ಇದೆ. 2026ರ ಮಾರ್ಚ್ 31ರ ಒಳಗೆ ದೇಶವನ್ನು ನಕ್ಸಲ್ ಮುಕ್ತ ಮಾಡುವುದಾಗಿ ಗೃಹ ಸಚಿವ ಅಮಿತ್ ಶಾ ಅವರು ಪದೇ ಪದೇ ಹೇಳುತ್ತಲೇ ಬರುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.