ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಮ್ಮು: ರಜೌರಿಯ ಉಗ್ರರ ಅಡಗುದಾಣಗಳಿಗೆ ದಾಳಿ; ಶಸ್ತ್ರಾಸ್ತ್ರ ವಶ

Published 21 ಏಪ್ರಿಲ್ 2024, 11:21 IST
Last Updated 21 ಏಪ್ರಿಲ್ 2024, 11:21 IST
ಅಕ್ಷರ ಗಾತ್ರ

ಜಮ್ಮು: ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಉಗ್ರರ ಅಡಗುದಾಣದ ಮೇಲೆ ಭದ್ರತಾ ಪಡೆಗಳು ಭಾನುವಾರ ದಾಳಿ ನಡೆಸಿದ್ದು, 8 ಕಚ್ಚಾ ಬಾಂಬ್‌, 2 ವೈರ್‌ಲೆಸ್‌ ಸೆಟ್‌ಗಳು ಹಾಗೂ ಕೆಲವು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಶಪಡಿಸಿಕೊಂಡ ವಸ್ತುಗಳು ತುಕ್ಕುಹಿಡಿದ ಸ್ಥಿತಿಯಲ್ಲಿವೆ. ಎರಡು ದಶಕಗಳ ಹಿಂದೆ ಜಿಲ್ಲೆಯನ್ನು ಉಗ್ರರಿಂದ ಮುಕ್ತಿಗೊಳಿಸುವುದಕ್ಕೂ ಮುನ್ನ ಈ ಅಡಗುದಾಣ ಇತ್ತು ಎನ್ನುವುದರ ಸಂಕೇತ ಇದು ಎಂದು ಅಧಿಕಾರಿಗಳು ಹೇಳಿದ್ದಾರೆ.

ರಜೌರಿ ನಗರದ 30 ಕಿ.ಮಿ ದೂರದಲ್ಲಿರುವ ತನ್ನಮಂಡಿ ಪ್ರದೇಶದ ಅಜ್ಮತ್‌ಬಾದ್‌ ಗ್ರಾಮದಲ್ಲಿ ಪೊಲೀಸರು ಸೇನಾಪಡೆಗಳ ಬೆಂಬಲದೊಂದಿಗೆ ಶೋಧ ನಡೆಸಿ ಅಡಗುದಾಣವನ್ನು ಪತ್ತೆ ಮಾಡಿದ್ದಾರೆ. ಕಚ್ಚಾ ಬಾಂಬ್‌ಗಳ ಪೈಕಿ ಒಂದು ಬಾಂಬ್ 1 ಕೆ.ಜಿ ತೂಕವಿದ್ದರೆ, ಉಳಿದವು ಅರ್ಧ ಕೆ.ಜಿ ತೂಕವಿದ್ದವು ಎಂದು ಅವರು ತಿಳಿಸಿದ್ದಾರೆ.

ಎ.ಕೆ–47 ರೈಫಲ್‌ನ 3 ಕೋಠಿ, 2 ವೈರ್‌ಲೆಸ್‌ ಸೇರಿ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT