ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಮ್ಮು: ಕಾಶ್ಮೀರಿ ಪಂಡಿತರ ಸಂಘಟನೆ ಕಾಂಗ್ರೆಸ್ ಜತೆ ವಿಲೀನ

Published 13 ಏಪ್ರಿಲ್ 2024, 12:52 IST
Last Updated 13 ಏಪ್ರಿಲ್ 2024, 12:52 IST
ಅಕ್ಷರ ಗಾತ್ರ

ಜಮ್ಮು: ಕಾಶ್ಮೀರಿ ಪಂಡಿತರ ಸಂಘಟನೆಗಳಲ್ಲಿ ಒಂದಾಗಿರುವ ಆಲ್‌ ಇಂಡಿಯಾ ಕಾಶ್ಮೀರಿ ಹಿಂದೂ ಫೋರಂ (ಎಐಕೆಎಚ್‌ಎಫ್‌), ಶನಿವಾರ ಕಾಂಗ್ರೆಸ್‌ ಜತೆ ವಿಲೀನಗೊಂಡಿತು.

ಜಮ್ಮು ಮತ್ತು ಕಾಶ್ಮೀರ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ವಿಕಾರ್‌ ರಸೂಲ್‌ ವಾನಿ ಅವರು ಪಕ್ಷದ ಕಚೇರಿಯಲ್ಲಿ ಎಐಕೆಎಚ್‌ಎಫ್‌ ಮುಖ್ಯಸ್ಥ ರತನ್‌ ಲಾಲ್‌ ಭನ್‌ ಹಾಗೂ ಇತರ ಪದಾಧಿಕಾರಿಗಳನ್ನು ಪಕ್ಷಕ್ಕೆ ಸ್ವಾಗತಿಸಿದರು.

1998 ರಲ್ಲಿ ಸ್ಥಾಪನೆಯಾಗಿರುವ ಎಐಕೆಎಚ್‌ಎಫ್‌ನ ನೂರಾರು ಸದಸ್ಯರು ಕಾಂಗ್ರೆಸ್‌ ಸೇರಿರುವುದರಿಂದ ಪಕ್ಷದ ಬಲ ವೃದ್ಧಿಸಿದೆ ಎಂದು ವಾನಿ ಹೇಳಿದರು. 

‘ಬಿಜೆಪಿಯ ತನ್ನ 10 ವರ್ಷಗಳ ಆಡಳಿತದಲ್ಲಿ ಕಾಶ್ಮೀರಿ ಪಂಡಿತರ ಸಮುದಾಯವನ್ನು ಮೂರ್ಖರನ್ನಾಗಿಸಿದ್ದು, ಕಾಶ್ಮೀರಿ ಪಂಡಿತರ ಎಲ್ಲ ಸಂಘಟನೆಗಳೂ ಕಾಂಗ್ರೆಸ್‌ ಸೇರಿಕೊಳ್ಳಬೇಕು’ ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT