ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖಾಮುಖಿ: ಅನಂತನಾಗ್‌– ರಜೌರಿ (ಜಮ್ಮು ಮತ್ತು ಕಾಶ್ಮೀರ)

Published 20 ಏಪ್ರಿಲ್ 2024, 1:07 IST
Last Updated 20 ಏಪ್ರಿಲ್ 2024, 1:07 IST
ಅಕ್ಷರ ಗಾತ್ರ

ಮೆಹಬೂಬಾ ಮುಫ್ತಿ (ಪಿಡಿಪಿ)

ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದ ಅನಂತ್‌ನಾಗ್‌ –ರಜೌರಿ ಲೋಕಸಭಾ ಕ್ಷೇತ್ರವು ಈ ಬಾರಿ ಪಿಡಿಪಿ ಮತ್ತು ನ್ಯಾಷನಲ್‌ ಕಾನ್ಫರೆನ್ಸ್ ಅಭ್ಯರ್ಥಿಗಳ ನಡುವಿನ ತುರುಸಿನ ಸ್ಪರ್ಧೆಗೆ ಸಾಕ್ಷಿಯಾಗಲಿದೆ. ಪುನರ್‌ ವಿಂಗಡನೆಯಾದ ಬಳಿಕ ಹೊಸದಾಗಿ ರಚನೆಯಾದ ಈ ಕ್ಷೇತ್ರದಿಂದ ಪಿಡಿಪಿ ಅಭ್ಯರ್ಥಿಯಾಗಿ ಪಕ್ಷದ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಅವರೇ ಕಣಕ್ಕಿಳಿದಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಮೊದಲ ಮಹಿಳಾ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಮುಫ್ತಿ ಅವರು, ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದ್ದರು. 2018ರಲ್ಲಿ ಬಿಜೆಪಿಯು ಬೆಂಬಲ ಹಿಂಪಡೆದಾಗ ಇವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಮೆಹಬೂಬಾ ಅವರ ಪಕ್ಷ ಕೂಡ ‘ಇಂಡಿಯಾ’ ಒಕ್ಕೂಟದ ಜೊತೆಗೆ ಗುರುತಿಸಿಕೊಂಡಿತ್ತು. ಆದರೆ ನ್ಯಾಷನಲ್‌ ಕಾನ್ಫರೆನ್ಸ್, ಜಮ್ಮು ಮತ್ತು ಕಾಶ್ಮೀರದ ಎಲ್ಲಾ ಕ್ಷೇತ್ರಗಳಲ್ಲೂ ಸ್ಪರ್ಧಿಸುವುದಾಗಿ ಘೋಷಿಸಿದ ಬಳಿಕ, ತಮ್ಮ ‍ಪಕ್ಷವು ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಮುಫ್ತಿ ಘೋಷಿಸಿದ್ದರು.

.................

ಮಿಯಾನ್‌ ಅಲ್ತಾಫ್‌ ಅಹ್ಮದ್‌ (ನ್ಯಾಷನಲ್‌ ಕಾನ್ಫರೆನ್ಸ್‌)

ಮೆಹಬೂಬಾ ಮುಫ್ತಿ ಅವರನ್ನು ಮಣಿಸಲು ನ್ಯಾಷನಲ್‌ ಕಾನ್ಫರೆನ್ಸ್‌, ಗುಜ್ಜರ್‌ ಮುಖಂಡ ಮಿಯಾನ್‌ ಅಲ್ತಾಫ್‌ ಅಹಮ್ಮದ್‌ ಅವರನ್ನು ಅಖಾಡಕ್ಕಿಳಿಸಿದೆ. ನ್ಯಾಷನಲ್‌ ಕಾನ್ಫರೆನ್ಸ್‌, ‘ಇಂಡಿಯಾ’ ಮೈತ್ರಿಕೂಟದ ಜೊತೆಗಿರುವುದರಿಂದ ಅಲ್ತಾಫ್‌ ಅವರು ಗೆಲ್ಲುವ ಸಾಧ್ಯತೆ ಹೆಚ್ಚಿದೆ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿದೆ. ಅಲ್ತಾಫ್‌ ಅವರು ‘ಗುಜ್ಜರ್‌ ಜಾಟ್‌ ಕಾನ್ಫರೆನ್ಸ್‌’ನ ಸ್ಥಾಪಕ ಅಧ್ಯಕ್ಷ ಮಿಯಾನ್‌ ನಿಜಾಮುದ್ದೀನ್‌ ಅವರ ಮೊಮ್ಮಗ. ಅಲ್ತಾಫ್‌ ಅವರ ತಂದೆ ಮಿಯಾನ್‌ ಬಶೀರ್‌ ಅಹಮ್ಮದ್‌ ಕೂಡ ಪ್ರಭಾವಿ ಮುಖಂಡರಾಗಿದ್ದರು. ಅಲ್ತಾಫ್‌ ಅವರು ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದರು. ಅಲ್ಲದೆ ಇವರು ಗುಜ್ಜರ್, ಬಕರ್ವಾಲ್ ಮತ್ತು ಪಹಾರಿ ಸಮುದಾಯದ ಮುಖಂಡರೂ ಹೌದು. ಸ್ಥಳೀಯವಾಗಿ ಪ್ರಭಾವಿ ಮುಖಂಡರಾಗಿರುವುದರಿಂದಲೇ ನ್ಯಾಷನಲ್‌ ಕಾನ್ಪರೆನ್ಸ್‌ ಇವರನ್ನು ಕಣಕ್ಕಿಳಿಸಿದೆ.

ಮಿಯಾನ್‌ ಅಲ್ತಾಫ್‌
ಮಿಯಾನ್‌ ಅಲ್ತಾಫ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT