ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

4 ತಿಂಗಳಲ್ಲಿ ಎಂಟು ಆಫ್ರಿಕಾ ಚೀತಾಗಳ ಸಾವು!

Published 14 ಜುಲೈ 2023, 10:27 IST
Last Updated 14 ಜುಲೈ 2023, 10:27 IST
ಅಕ್ಷರ ಗಾತ್ರ

ಭೋಪಾಲ್: ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನದಲ್ಲಿ ಶುಕ್ರವಾರ ‘ಸೂರಜ್’ ಹೆಸರಿನ ಗಂಡು ಚೀತಾ ಮೃತಪಟ್ಟಿದೆ ಎಂದು ಎನ್‌ಡಿ ಟಿ.ವಿ ವರದಿ ಮಾಡಿದೆ.

ಚೀತಾದ ಕಳೇಬರ ಇಲ್ಲಿನ ರಾಷ್ಟ್ರೀಯ ಉದ್ಯಾನದಲ್ಲಿ ಶುಕ್ರವಾರ ನಸುಕಿನಲ್ಲಿ ಪತ್ತೆಯಾಗಿದೆ. ಇದರ ಸಾವಿಗೆ ನಿಖರ ಕಾರಣವನ್ನು ಪತ್ತೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೇಲ್ನೋಟಕ್ಕೆ ಹೆಣ್ಣು ಚೀತಾದೊಂದಿಗಿನ ಕಾದಾಟದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಸೂರಜ್, ಆ ಆಘಾತದಿಂದ ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ಮಾರ್ಚ್ 27ರಂದು ಸಷಾ ಎಂಬ ಹೆಣ್ಣು ಚೀತಾ ಮೂತ್ರಪಿಂಡ ಸಮಸ್ಯೆಯಿಂದ ಮೃತಪಟ್ಟಿತ್ತು. ಏ. 23ರಂದು ಹೃದಯ ಸಂಬಂಧಿ ಸಮಸ್ಯೆಯಿಂದ ಉದಯ ಮೃತಪಟ್ಟರೆ, ಮೇ 8ರಂದು ದಕ್ಷಾ ಎಂಬ ಹೆಣ್ಣು ಚಿತಾ ಗಂಡಿನೊಂದಿಗಿನ ಕಾದಾಟದಲ್ಲಿ ಮಡಿದಿತ್ತು. ಪ್ರತಿಕೂಲ ಹವಮಾನದ ತಾಳಲಾರದೆ ಎರಡು ಚೀತಾ ಮರಿಗಳು ಮೇ 25ರಂದು ಮೃತಪಟ್ಟಿವೆ.

ಚೀತಾವನ್ನು ಭಾರತಕ್ಕೆ ಮರು ಪರಿಚಯಿಸುವ ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ.

ಈ ಯೋಜನೆ ಭಾಗವಾಗಿ ತರಲಾದ ಚೀತಾಗಳ ಸಾವಿಗೆ ಇತರ ಪ್ರಾಣಿಗಳೊಂದಿಗೆ ಕಾದಾಟ ಮತ್ತು ಹೊಸ ಜಾಗದಲ್ಲಿ ಹೊಂದಿಕೊಳ್ಳಲು ಸಾಧ್ಯವಾಗದಿರುವುದೇ ಪ್ರಮುಖ ಕಾರಣ ಎಂದು ದಕ್ಷಿಣ ಆಫ್ರಿಕಾದ ವನ್ಯಜೀವಿ ಪರಿಣಿತ ವ್ಯಾನ್‌ಡೆರ್‌ ಮೆರ್ವೆ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT