ಮಂಗಳವಾರ, 15 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹರಿಯಾಣ | ಕಾಂಗ್ರೆಸ್–ಎಎಪಿ ಸೀಟು ಹಂಚಿಕೆ ಅಂತಿಮ?

Published : 8 ಸೆಪ್ಟೆಂಬರ್ 2024, 12:46 IST
Last Updated : 8 ಸೆಪ್ಟೆಂಬರ್ 2024, 12:46 IST
ಫಾಲೋ ಮಾಡಿ
Comments
ಜನರ ಆಶೀರ್ವಾದದಿಂದ ಗೆಲ್ಲುವೆ: ವಿನೇಶ್
ಕಾಂಗ್ರೆಸ್‌ ಅಭ್ಯರ್ಥಿ, ಕುಸ್ತಿಪಟು ವಿನೇಶ್ ಫೋಗಟ್‌ ಅವರು ವಿಧಾನಸಭಾ ಚುನಾವಣೆಗೆ ತಮ್ಮ ಪ್ರಚಾರ ಆರಂಭಿಸಿದ್ದು, ‘ಜನರ ಆಶೀರ್ವಾದದೊಂದಿಗೆ ಗೆಲ್ಲುವ ವಿಶ್ವಾಸವಿದೆ’ ಎಂದು ಹೇಳಿದ್ದಾರೆ. 30 ವರ್ಷದ ಫೋಗಟ್‌ ಅವರನ್ನು ಕಾಂಗ್ರೆಸ್‌, ಜುಲಾನಾ ಕ್ಷೇತ್ರದಿಂದ ಕಣಕ್ಕಿಳಿಸಿದೆ. ಚುನಾವಣಾ ಪ್ರಚಾರಕ್ಕೆ ಭಾನುವಾರ ಜುಲಾನಾಕ್ಕೆ ಬಂದಾಗ ವಿವಿಧ ಖಾಪ್‌ ಪಂಚಾಯತ್‌ ಮುಖಂಡರು, ಮಹಿಳೆಯರು ಮತ್ತು ಹಿರಿಯರೂ ಒಳಗೊಂಡಂತೆ ಅಭಿಮಾನಿಗಳು ಅವರಿಗೆ ಅದ್ದೂರಿ ಸ್ವಾಗತ ನೀಡಿದರು. ‘ನನ್ನ ಪ್ರೀತಿಪಾತ್ರರು ಯಾವಾಗಲೂ ಬೆಂಬಲಿಸಿದ್ದಾರೆ. ಕುಸ್ತಿಯಲ್ಲಿ ಕಣಕ್ಕಿಳಿದಾಗ ಬೆಂಬಲಿಸಿ ಗೆಲುವನ್ನು ಖಚಿತಪಡಿಸಿಕೊಂಡಂತೆ, ಅವರು ಚುನಾವಣಾ ಕಣದಲ್ಲೂ ಬೆಂಬಲ ಮುಂದುವರಿಸುವ ವಿಶ್ವಾಸವಿದೆ. ಅವರ ಆಶೀರ್ವಾದದಿಂದ ನಾವು ಪ್ರತಿ ಹೋರಾಟವನ್ನು ಗೆಲ್ಲುತ್ತೇವೆ’ ಎಂದು ಬೆಂಬಲಿಗರನ್ನುದ್ದೇಶಿಸಿ ಅವರು ನುಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT