ಚಂಡೀಗಢ: ಪಂಜಾಬ್ನ ಎಎಪಿ ನಾಯಕಿ ಅನ್ಮೊಲ್ ಗಗನ್ ಮಾನ್ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ಹೇಳಿದ್ದಾರೆ.

ರಾಜೀನಾಮೆ ಬಗ್ಗೆ ಎಕ್ಸ್ ನಲ್ಲಿ ಅವರು ಬರೆದಕೊಂಡಿದ್ದಾರೆ. ರಾಜಕೀಯ ತೊರೆಯಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.
.ರಾಜಕೀಯ ಬೆಳವಣಿಗೆ: 'ಇಂಡಿಯಾ' ಮೈತ್ರಿಯಿಂದ ಹೊರಬಂದ ಎಎಪಿ; ಕಾಂಗ್ರೆಸ್ಗೆ ಶಾಕ್.
ಖರಾರ್ ಕ್ಷೇತ್ರದ ಶಾಸಕಿಯಾಗಿರುವ ಅವರು, ಪಂಜಾಬ್ ವಿಧಾನಸಭೆ ಸ್ಪೀಕರ್ ಕುಲ್ಟರ್ ಸಿಂಗ್ ಸಂಧ್ವಾನ್ ಅವರಿಗೆ ರಾಜೀನಾಮೆ ಪತ್ರ ರವಾನಿಸಿದ್ದಾರೆ.

‘ನನ್ನ ಹೃದಯ ಭಾರವಾಗಿದೆ. ನಾನು ರಾಜಕೀಯ ತೊರೆಯಲು ನಿರ್ಧರಿಸಿರುವೆ. ಶಾಸಕ್ಕೆ ಸ್ಥಾನಕ್ಕೆ ನಾನು ನೀಡಿರುವ ರಾಜೀನಾಮೆ ಸ್ಪೀಕರ್ ಅಂಗೀಕರಿಸಬೇಕು’ ಎಂದು ಹೇಳಿದ್ದಾರೆ.
.ಆಟೊಗಳಿಗೆ ಪರ್ಮಿಟ್ ನೀಡದೇ ದಂಡ ಸರಿಯಲ್ಲ: ಎಎಪಿ.
‘ಪಕ್ಷಕ್ಕೆ ನನ್ನ ಶುಭಾಶಯಗಳು. ಪಂಜಾಬ್ ಸರ್ಕಾರ ಜನರ ನಿರೀಕ್ಷೆಗಳಿಗೆ ತಕ್ಕಂತೆ ಕೆಲಸ ಮಾಡುತ್ತದೆ ಎಂದು ನಾನು ಭಾವಿಸುವೆ’ ಎಂದು ಪಂಜಾಬಿ ಭಾಷೆಯಲ್ಲಿ ಮಾಡಿದ ಎಕ್ಸ್ ಪೋಸ್ಟ್ನಲ್ಲಿ ಅವರು ತಿಳಿಸಿದ್ದಾರೆ.

ಗಾಯಕಿಯಾಗಿರುವ ಅವರು ಎಎಪಿ ಪಕ್ಷ ಸೇರಿ 2022ರ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಶಾಸಕರಾಗಿ ಚುನಾಯಿತರಾಗಿದ್ದರು.

ಸಚಿವೆಯಾಗಿಯೂ ಕೆಲಸ ನಿರ್ವಹಿಸಿದ್ದ ಅವರು, ಪ್ರವಾಸೋದ್ಯಮ, ಸಂಸ್ಕೃತಿ, ಬಂಡವಾಳ ಪ್ರೋತ್ಸಾಹ, ಕಾರ್ಮಿಕ ಹಾಗೂ ಆತಿಥ್ಯ ಖಾತೆಗಳನ್ನು ನಿರ್ವಹಿಸಿದ್ದರು. ಆದರೆ ಒಂದು ವರ್ಷಗಳ ಬಳಿಕ ಸಚಿವ ಸಂಪುಟ ಪುನಾರಚನೆ ಮಾಡುವಾಗ ಅವರನ್ನು ಕೈಬಿಡಲಾಗಿತ್ತು.
.ಗುಜರಾತ್: ಪಂಚಾಯತ್ ಸದಸ್ಯನ ಮೇಲೆ ಹಲ್ಲೆ: ಎಎಪಿ ಶಾಸಕನ ಬಂಧನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.