ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ ಅಬಕಾರಿ ನೀತಿ ಪ್ರಕರಣ: ಇ.ಡಿ ವಿಚಾರಣೆಗೆ ಹಾಜರಾದ AAP ಗೋವಾ ಘಟಕದ ಮುಖ್ಯಸ್ಥ

Published 28 ಮಾರ್ಚ್ 2024, 10:04 IST
Last Updated 28 ಮಾರ್ಚ್ 2024, 10:04 IST
ಅಕ್ಷರ ಗಾತ್ರ

ಪಣಜಿ: ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ನಡೆದಿದೆ ಎನ್ನಲಾದ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಮ್ ಆದ್ಮಿ ಪಕ್ಷದ (ಎಎಪಿ) ಗೋವಾ ಘಟಕದ ಅಧ್ಯಕ್ಷ ಅಮಿತ್ ಪಾಲೇಕರ್ ಹಾಗೂ ಇತರ ಮೂವರು ಗುರುವಾರ ಜಾರಿ ನಿರ್ದೇಶನಾಲಯದ (ಇ.ಡಿ) ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ.

ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ನಾಲ್ವರನ್ನು ವಿಚಾರಣೆಗೆ ಕರೆಯಲಾಗಿದೆ ಎಂದು ಇ.ಡಿ ಮೂಲಗಳು ತಿಳಿಸಿವೆ.

ಗೋವಾ ಘಟಕದ ಅಧ್ಯಕ್ಷ ಅಮಿತ್ ಪಾಲೇಕರ್, ಎಎಪಿ ನಾಯಕ ರಾಮರಾವ್ ವಾಘ್, ದತ್ತಪ್ರಸಾದ್ ನಾಯ್ಕ್ ಮತ್ತು ಅಶೋಕ ನಾಯ್ಕ್ ಎಂಬುವವರನ್ನು ಇ.ಡಿ ವಿಚಾರಣೆಗೆ ಕರೆದಿತ್ತು. ದತ್ತಪ್ರಸಾದ್ ಮತ್ತು ಅಶೋಕ ಗೋವಾದ ಭಂಡಾರಿ ಸಮುದಾಯದ ಮುಖಂಡರು.

ಪಾಲೇಕರ್ ಅವರು ಮಧ್ಯಾಹ್ನ 12.10ಕ್ಕೆ ಇಲ್ಲಿನ ಇ.ಡಿ ಕಚೇರಿಗೆ ಆಗಮಿಸಿದ್ದರು. ಅವರಿಗಿಂತ ಮೊದಲು ಈ ಮೂವರು (ರಾಮರಾವ್ ವಾಘ್, ದತ್ತಪ್ರಸಾದ್ ಮತ್ತು ಅಶೋಕ) ಬೆಳಿಗ್ಗೆ 11.15ಕ್ಕೆ ವಿಚಾರಣೆಗೆ ಹಾಜರಾಗಿದ್ದರು.

ಇ.ಡಿ ಕಚೇರಿ ಪ್ರವೇಶಿಸುವ ಮುನ್ನ ಮಾತನಾಡಿದ ಪಾಲೇಕರ್, 'ನನಗೆ ಸಮನ್ಸ್ ಬಂದಿದೆ. ವಿಚಾರಣೆ ಬಳಿಕ ನಿಮ್ಮೊಂದಿಗೆ ಮಾತನಾಡುತ್ತೇನೆ' ಎಂದು ಹೇಳಿದ್ದಾರೆ.

ಪ್ರಕರಣ ಸಂಬಂಧ ‌ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಇತರ ಎಎಪಿ ನಾಯಕರನ್ನು ಬಂಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT