ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

RS ಚುನಾವಣೆ: ತೆಲಂಗಾಣದಿಂದ 'ಕೈ’ ಅಭ್ಯರ್ಥಿಯಾಗಿ ಅಭಿಷೇಕ್ ಮನುಸಿಂಘ್ವಿ ನಾಮಪತ್ರ

Published : 19 ಆಗಸ್ಟ್ 2024, 11:17 IST
Last Updated : 19 ಆಗಸ್ಟ್ 2024, 11:17 IST
ಫಾಲೋ ಮಾಡಿ
Comments

ಹೈದರಾಬಾದ್: ಹಿಮಾಚಲ ಪ್ರದೇಶದಲ್ಲಿ ಸ್ವಪಕ್ಷೀಯ ಶಾಸಕರ ಅಡ್ಡಮತದಾನದಿಂದ ಪರಾಭವಗೊಂಡಿದ್ದ ಕಾಂಗ್ರೆಸ್‌ ಅಭ್ಯರ್ಥಿ ಅಭಿಷೇಕ್ ಮನುಸಿಂಘ್ವಿ ಅವರು ರಾಜ್ಯಸಭಾ ಚುನಾವಣೆಗೆ ಈ ಬಾರಿ ತೆಲಂಗಾಣದಿಂದ ಆಯ್ಕೆ ಬಯಸಿ, ನಾಮಪತ್ರ ಸಲ್ಲಿಸಿದ್ದಾರೆ.

ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಮುಖ್ಯಮಂತ್ರಿ ರೇವಂತ ರೆಡ್ಡಿ, ಸಚಿವರು, ತೆಲಂಗಾಣದ ಎಐಸಿಸಿ ಉಸ್ತುವಾರಿ ದೀಪಾ ದಾಸ್ ಮುನ್ಶಿ ಅವರು ಸಿಂಘ್ವಿ ಅವರೊಂದಿಗಿದ್ದರು. 

ರಾಜ್ಯಸಭಾ ಚುನಾವಣೆಗೆ ಸಿಂಘ್ವಿ ಅವರ ಹೆಸರನ್ನು ಆಡಳಿತಾರೂಢ ಕಾಂಗ್ರೆಸ್ ಶಾಸಕಾಂಗ ಪಕ್ಷವು ಭಾನುವಾರ ರಾತ್ರಿ ಅಂತಿಮಗೊಳಿಸಿತ್ತು.

ಹಿಮಾಚಲ ಪ್ರದೇಶದಲ್ಲಿ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡಮತದಾನವಾದ ಪರಿಣಾಮ ಆಡಳಿತಾರೂಢ ಕಾಂಗ್ರೆಸ್‌ ಅಭ್ಯರ್ಥಿ ಅಭಿಷೇಕ್‌ ಮನು ಸಿಂಘ್ವಿ ವಿರುದ್ಧ ಬಿಜೆಪಿ ಅಭ್ಯರ್ಥಿ ಹರ್ಷ್‌ ಮಹಾಜನ್‌ ಗೆಲುವು ಸಾಧಿಸಿದ್ದರು.

68 ಸದಸ್ಯ ಬಲದ ರಾಜ್ಯ ವಿಧಾನಸಭೆಯಲ್ಲಿ 40 ಶಾಸಕರನ್ನು ಮತ್ತು ಮೂವರು ಸ್ವತಂತ್ರರ ಬೆಂಬಲವನ್ನು ಪಡೆದಿರುವ ಕಾಂಗ್ರೆಸ್‌ಗೆ ಇದು ದೊಡ್ಡ ಆಘಾತವಾಗಿತ್ತು. 

ಆ ಚುನಾವಣೆಯಲ್ಲಿ ಶಾಸಕರು ‘ಆತ್ಮಸಾಕ್ಷಿಯ ಮತ’ ಚಲಾಯಿಸುತ್ತಾರೆ ಎಂದು ಕಾಂಗ್ರೆಸ್ ವಿಶ್ವಾಸದಲ್ಲಿತ್ತು. ಆದರೆ ಬಿಜೆಪಿ ಪರವಾಗಿ ‘ಕೈ‘ನ ಒಂಬತ್ತು ಶಾಸಕರು ಮತ ಚಲಾಯಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT