ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಉನ್ನತ ವಿದ್ಯಾರ್ಹತೆ: ಒಂದೇ ರೀತಿ ಲಾಭ ಸಿಗದು– ಸುಪ್ರೀಂ ಕೋರ್ಟ್‌

Published : 23 ಆಗಸ್ಟ್ 2024, 23:30 IST
Last Updated : 23 ಆಗಸ್ಟ್ 2024, 23:30 IST
ಫಾಲೋ ಮಾಡಿ
Comments

ನವದೆಹಲಿ: ವಿವಿಧ ಕೇಡರ್‌ಗಳಲ್ಲಿ ಇರುವ ಸಿಬ್ಬಂದಿ ಉನ್ನತ ವಿದ್ಯಾರ್ಹತೆ ಪಡೆದುಕೊಳ್ಳುವ ಮೂಲಕ ಒಂದೇ ರೀತಿಯ ಪ್ರಯೋಜನಗಳನ್ನು ಪಡೆದುಕೊಳ್ಳಲು ಆಗುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ಭಾರತೀಯ ಕೃಷಿ ಸಂಶೋಧನಾ ಮಂಡಳಿಯ (ಐಸಿಎಆರ್‌) ವಿಜ್ಞಾನಿಗಳಿಗಿರುವ 1999ರ ಯೋಜನೆಯ ಲಾಭವನ್ನು ತಾಂತ್ರಿಕ ಸಿಬ್ಬಂದಿಗೂ ವಿಸ್ತರಿಸಿ ಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿ (ಸಿಎಟಿ) ನೀಡಿದ್ದ ಆದೇಶವನ್ನು ಎತ್ತಿಹಿಡಿದಿದ್ದ ದೆಹಲಿ ಹೈಕೋರ್ಟ್‌ ತೀರ್ಪನ್ನು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ಜಿ.ಕೆ.ಮಾಹೇಶ್ವರಿ ಮತ್ತು ರಾಜೇಶ್‌ ಬಿಂದಾಲ್‌ ಅವರ ಪೀಠ ಅನೂರ್ಜಿತಗೊಳಿಸಿದೆ.

ಐಸಿಎಆರ್‌ನ ವಿಜ್ಞಾನಿಗಳು ಸೇವಾ ಅವಧಿಯಲ್ಲಿ ಪಿಎಚ್‌.ಡಿ. ಪಡೆದರೆ ಅವರಿಗೆ ಎರಡು ಮುಂಗಡ ವೇತನ ಬಡ್ತಿ (ಇನ್‌ಕ್ರಿಮೆಂಟ್‌) ನೀಡಲಾಗುತ್ತದೆ. ಅದನ್ನೇ ತಾಂತ್ರಿಕ ಸಿಬ್ಬಂದಿಗೂ ಅನ್ವಯಿಸುವಂತೆ ಕೇಂದ್ರೀಯ ಆಡಳಿತಾತ್ಮಕ ಮಂಡಳಿ ಆದೇಶಿಸಿತ್ತು. ಅದನ್ನು ಹೈಕೋರ್ಟ್‌ ಎತ್ತಿಹಿಡಿದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT