ನವದೆಹಲಿ: ದೇಶದ ಅತ್ಯುನ್ನತ ತನಿಖಾ ಸಂಸ್ಥೆ ಸಿಬಿಐಗೆ ನೂತನ ನಿರ್ದೇಶಕರನ್ನು ಆಯ್ಕೆ ಮಾಡಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಉನ್ನತ ಮಟ್ಟದ ಸಮಿತಿಯು ಜನವರಿ 24ರಂದು ಸಭೆ ನಡೆಸಲಿದೆ.

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ, ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಉನ್ನತ ಮಟ್ಟದ ಸಮಿತಿ ಸಭೆ ನಡೆಸಿ, ಸಿಬಿಐ ಮುಖ್ಯಸ್ಥರ ಆಯ್ಕೆ ಮಾಡಲಿದ್ದಾರೆ.

ಇದನ್ನೂ ಓದಿ:ಕಚ್ಚಾಟಕ್ಕೆ ಅಲೋಕ್ ತಲೆದಂಡ: ಸಿಬಿಐ ನಿರ್ದೇಶಕ ಹುದ್ದೆಯಿಂದ ವಜಾ

ಅಧಿಕಾರಕ್ಕೆ ನಿಯಂತ್ರಣ ಹೇರುವ ಜತೆಗೆ ಅಲೋಕ್ ವರ್ಮಾ ಅವರನ್ನು ಸಿಬಿಐ ನಿರ್ದೇಶಕರಾಗಿ ಮುಂದುವರಿಯುವಂತೆ ಸುಪ್ರೀಂ ಕೋರ್ಟ್ ಆದೇಶಿಸಿತ್ತು.ದೆಹಲಿ ಸಿಬಿಐ ಕಚೇರಿಯ ಹತ್ತನೇ ಮಹಡಿಯಲ್ಲಿರುವ ಕಚೇರಿಯಲ್ಲಿಅಲೋಕ್ ವರ್ಮಾ ಮತ್ತೆ ಅಧಿಕಾರ ವಹಿಸಿ ಎರಡನೇ ದಿನಗಳಲ್ಲಿ ಸ್ಥಾನದಿಂದ ತೆರವುಗೊಂಡರು. ಪ್ರಧಾನಿ ಮೋದಿ, ಮುಖ್ಯ ನ್ಯಾಯಮೂರ್ತಿ ನಿರ್ದೇಶನದ ಮೇರೆಗೆ ಹಾಜರಿದ್ದ ನ್ಯಾಯಮೂರ್ತಿ ಎ.ಕೆ.ಸಿಕ್ರಿ ಹಾಗೂ ವಿರೋಧ ಪಕ್ಷದ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರನ್ನು ಒಳಗೊಂಡ ಉನ್ನತ ಮಟ್ಟದ ಸಮಿತಿಯು ಜ.10ರಂದು ವರ್ಮಾ ಅವರನ್ನು ಪದಚ್ಯುತಗೊಳಿಸಿತು.

’ವರ್ಮಾ ಅವರ ಮೇಲಿನ ಕೆಲವು ಪ್ರಕರಣಗಳಲ್ಲಿ ಅಪರಾಧ ತನಿಖೆಯೂ ಸೇರಿದಂತೆ ವಿವರವಾದ ತನಿಖೆಯ ಅವಶ್ಯಕತೆ ಇರುವುದನ್ನು ಸಮಿತಿಯು ಮನಗಂಡಿತ್ತು...’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾಗಿ ಹಿಂದುಸ್ತಾನ್ ಟೈಮ್ಸ್ ವರದಿ ಮಾಡಿದೆ.

ಇದನ್ನೂ ಓದಿ:ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ವಜಾ ಪ್ರಕರಣ: ದಾಖಲೆ ಬಹಿರಂಗಕ್ಕೆ ಖರ್ಗೆ ಆಗ್ರಹ

ವರ್ಮಾ ಅವರನ್ನು ಸ್ಥಾನದಿಂದ ತೆರವುಗೊಳಿಸುವುದರ ಪರವಾಗಿ ಪ್ರಧಾನಿ ಹಾಗೂ ನ್ಯಾಯಮೂರ್ತಿ ಸಿಕ್ರಿ ನಿಲುವು ತಳಿದಿದ್ದರು, ಖರ್ಗೆ ಅವರು ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಸಿಬಿಐ ನಿರ್ದೇಶಕರಾಗಿ ಎರಡು ವರ್ಷ ಪೂರೈಸುವುದಕ್ಕೂ ಮುನ್ನವೇ ಪದಚ್ಯುತಗೊಳಿಸಿದ್ದು ಇದೇ ಮೊದಲು. ವರ್ಮಾ ಅವರ ಅಧಿಕಾರ ಅವಧಿ ಜ.31ಕ್ಕೆ ಪೂರ್ಣಗೊಳ್ಳುತ್ತಿತ್ತು.

2018ರ ಅಕ್ಟೋಬರ್ 24ರ ಬೆಳಗಿನ ಜಾವ ವರ್ಮಾ ಅವರನ್ನು ಸ್ಥಾನದಿಂದ ತೆರವುಗೊಳಿಸಿ ಸರ್ಕಾರ ಆದೇಶಿಸಿದ ಬೆನ್ನಲೇ ಎಂ.ನಾಗೇಶ್ವರ ರಾವ್ ಅವರನ್ನು ಸಿಬಿಐ ಹಂಗಾಮಿ ನಿರ್ದೇಶಕರಾಗಿ ನೇಮಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.