ಬುಧವಾರ, 29 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಫೋನಿ’ ಅಬ್ಬರಕ್ಕೆ ಮನೆ ಕಳೆದುಕೊಂಡ ದಲಿತ ಕುಟುಂಬಕ್ಕೀಗ ಶೌಚಾಲಯವೇ ವಾಸಸ್ಥಾನ

ಬಿಹಾರದ ಕೇಂದ್ರಪರ ಜಿಲ್ಲೆಯ ಕುಟುಂಬ
Last Updated 18 ಮೇ 2019, 11:31 IST
ಅಕ್ಷರ ಗಾತ್ರ

ಕೇಂದ್ರಪರ: ಫೋನಿ ಚಂಡಮಾರುತದ ಅಬ್ಬರಕ್ಕೆ ಮನೆ ಕಳೆದುಕೊಂಡ ದಲಿತ ಕುಟುಂಬ ಅನಿವಾರ್ಯವಾಗಿ ಶೌಚಾಲಯದಲ್ಲಿ ವಾಸಿಸುವ ಸ್ಥಿತಿ ಬಿಹಾರದ ಕೇಂದ್ರಪರದಲ್ಲಿನಿರ್ಮಾಣವಾಗಿದೆ.

ಮೇ 3ರಂದು ಫೋನಿ ಒಡಿಶಾಗೆ ಅಪ್ಪಳಿಸಿತ್ತು. ಬಿರುಗಾಳಿಗೆ ಕೇಂದ್ರಪರ ಜಿಲ್ಲೆಯ ರಾಘುದೈಪುರ್‌ ಹಳ್ಳಿಯ ದಿನಗೂಲಿ ನೌಕರ ಖಿರೋದ್ ಜೀನ ವಾಸಿಸುತ್ತಿದ್ದ ಮನೆ ಕುಸಿದುಬಿದ್ದಿತ್ತು. ಆದರೆ ಸ್ವಚ್ಛ ಭಾರತ್ ಮಿಷನ್ ಯೋಜನೆಯಲ್ಲಿ ನಿರ್ಮಾಣಗೊಳಿಸಿದ್ದ ಶೌಚಾಲಯಕ್ಕೆ ಹಾನಿಯಾಗಿರಲಿಲ್ಲ. ಮನೆ ಕಳೆದುಕೊಂಡ ಖಿರೋದ್, ತನ್ನ ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳ ಜತೆ 6 ಅಡಿ ಅಗಲದ ಶೌಚಾಲಯದಲ್ಲೇ ಜೀವನ ಸಾಗಿಸುತ್ತಿದ್ದಾರೆ.

‘ಚಂಡಮಾರುತ ನನ್ನ ಜೀವನವನ್ನೇ ಛಿದ್ರಗೊಳಿಸಿದೆ. ಹೊಸ ಮನೆ ಕಟ್ಟಲು ಹಣವಿಲ್ಲ. 2 ವರ್ಷದ ಹಿಂದೆ ಮನೆಯ ಆವರಣದಲ್ಲಿ ಶೌಚಾಲಯ ನಿರ್ಮಾಣ ಮಾಡಲಾಗಿತ್ತು. ಬೇರೆ ಯಾವ ಆಯ್ಕೆಯೂ ಇಲ್ಲದೆ ಇಲ್ಲೇ ವಾಸಿಸುತ್ತಿದ್ದೇವೆ. ಮನೆ ಕಟ್ಟಲು ಸರ್ಕಾರ ಪರಿಹಾರ ನೀಡುವವರೆಗೂ ಶೌಚಾಲಯವೇ ಮನೆಯಾಗಿರಲಿದೆ. ಬಹಿರ್ದೆಸೆಗೆ ಅನಿವಾರ್ಯವಾಗಿ ಬಯಲಿಗೆ ಹೋಗುತ್ತಿದ್ದೇವೆ’ ಎಂದು ಜೀನ ತಿಳಿಸಿದ್ದಾರೆ.

‘ಪ್ರಧಾನ ಮಂತ್ರಿ ಆವಾಸ್ ಯೋಜನೆ’ ಹಾಗೂ ‘ಬಿಜು ಪಕ್ಕಾ ಮನೆ ಯೋಜನೆ’ಯಡಿ ಮನೆ ನಿರ್ಮಿಸಲು ಧನಸಹಾಯ ಕೋರಿದ್ದೆ. ಆದರೆ ಧನಸಹಾಯ ದೊರಕಿರಲಿಲ್ಲ. ಮನೆ ನಿರ್ಮಾಣವಾಗಿದ್ದರೆ ನಮಗೆ ಈ ಸ್ಥಿತಿ ಬರುತ್ತಿರಲಿಲ್ಲ’ ಎಂದು ಜೀನ ಬೇಸರ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT