ನವದೆಹಲಿ: ‘ನನ್ನ ವರ್ಚಸ್ಸನ್ನು ಹಾಳುಗೆಡವಲು ಕೆಲವರು ದೇಶದ ಒಳಗೆ ಮತ್ತು ಹೊರಗಿನ ಜನರೊಂದಿಗೆ ಶಾಮೀಲಾಗಿದ್ದಾರೆ’ ಎಂಬ ಪ್ರಧಾನಿ ನರೇಂದ್ರ ಮೋದಿ ಆರೋಪಕ್ಕೆ ಪ್ರತಿಕ್ರಿಯಿಸಿರುವ ರಾಜ್ಯಸಭಾ ಸದಸ್ಯ ಕಪಿಲ್ ಸಿಬಲ್, ಅವರ ಹೆಸರುಗಳನ್ನು ಬಹಿರಂಗಪಡಿಸಿ, ವಿಚಾರಣೆಗೆ ಒಳಪಡಿಸೋಣ ಎಂದು ಹೇಳಿದರು.

ಭೋಪಾಲ್ನ ರಾಣಿ ಕಮಲಾಪತಿ ರೈಲ್ವೆ ನಿಲ್ದಾಣದಲ್ಲಿ ಭೋಪಾಲ್– ದೆಹಲಿ ಮಾರ್ಗದ ವಂದೇಭಾರತ್ ಎಕ್ಸ್ಪ್ರೆಸ್ ರೈಲು ಸಂಚಾರ ಉದ್ಘಾಟಿಸಿದ ಬಳಿಕ ಮಾತನಾಡಿದ್ದ ಮೋದಿ, ‘ನನ್ನ ವರ್ಚಸ್ಸು ಹಾಳುಗೆಡವಲು ಕೆಲವರಿಗೆ ಸುಪಾರಿಯನ್ನೂ ನೀಡಲಾಗಿದೆ’ ಎಂದು ಹೇಳಿಕೆ ನೀಡಿದ್ದರು.

‘ಕೆಲವರು ದೇಶದ ಒಳಗೆ ಮತ್ತು ಹೊರಗೆ ಮೋದಿ ಅವರ ಸಮಾಧಿ ಅಗೆಯಲು ಹೊರಟಿದ್ದಾರೆ. ದಯವಿಟ್ಟು ಅವರ ಹೆಸರುಗಳನ್ನು ತಿಳಿಸಬೇಕು. ವ್ಯಕ್ತಿಗಳು, ಸಂಸ್ಥೆಗಳು ಅಥವಾ ದೇಶಗಳು ಇರಬಹುದು. ಇದು ರಹಸ್ಯವಾಗಿರಲು ಸಾಧ್ಯವಿಲ್ಲ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳೋಣ’ ಎಂದು ಸಿಬಲ್ ಹೇಳಿದರು.

ಇದನ್ನೂ ಓದಿ: ನನ್ನ ವರ್ಚಸ್ಸು ಹಾಳುಗೆಡವಲು ಸುಪಾರಿ ನೀಡಲಾಗಿದೆ: ಮೋದಿ ಆರೋಪ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.