ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಾ.ಆನಂದ್ ತೇಲ್ತುಂಬ್ಡೆ ಬಂಧನ ವಿರೋಧಿಸಿ ಮೇ 16 ನ್ಯಾಯದ ದಿನ ಆಚರಿಸಲು ನಿರ್ಧಾರ

Last Updated 14 ಮೇ 2020, 10:12 IST
ಅಕ್ಷರ ಗಾತ್ರ

ಬೆಂಗಳೂರು: ಡಾ.ಬಿ.ಆರ್. ಅಂಬೇಡ್ಕರ್ ಮೊಮ್ಮಗಳ ಪತಿ ಹಾಗೂ ವಿದ್ವಾಂಸ, ಲೋಕ ಚಿಂತಕ ಹಾಗೂ ಮಾನವ ಹಕ್ಕುಗಳ ಸಕ್ರಿಯ ಪ್ರತಿಪಾದಕ ಡಾ. ಆನಂದ್‍ ತೇಲ್ತುಂಬ್ಡೆಬಂಧನ ವಿರೋಧಿಸಿ ಮಾನವ ಹಕ್ಕುಗಳ ಹೋರಾಟಗಾರರು ಮೇ 16 ರಂದುನ್ಯಾಯ ದಿನವನ್ನಾಗಿ ಆಚರಿಸಲು ತೀರ್ಮಾನಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಡಾ.ತೇಲ್ತುಂಬ್ಡೆ ಅವರು ತಮ್ಮ ಚಿಂತನೆಗಳ ಮೂಲಕ ಡಾ.ಬಿ.ಆರ್.ಅಂಬೇಡ್ಕರ್ ವಿಚಾರಗಳನ್ನು ಪ್ರತಿಪಾದಿಸುತ್ತಿದ್ದಾರೆ. ಡಾ.ತೇಲ್ತುಂಬ್ಡೆ ಇಂದು ನ್ಯಾಯದ ಒಂದು ರಾಷ್ಟ್ರೀಯ ಸಂಕೇತವಾಗಿದ್ದಾರೆ. ಮಹಾರಾಷ್ಟ್ರದ ಹಳ್ಳಿಯೊಂದರಲ್ಲಿ ಬಡ ದಲಿತ ಕುಟುಂಬದಲ್ಲಿ ಹುಟ್ಟಿದರು. ಪೇಂಟರ್ ಆಗಿ ದುಡಿದು ವಿದ್ಯಾಭ್ಯಾಸ ಮಾಡಿದರು. ನಂತರ ಮೆಕಾನಿಕಲ್‍ ಎಂಜಿನಿಯರಆದವರು. ಅಹಮದಾಬಾದಿನ ಐಐಎಂನಲ್ಲಿ ಎಂಬಿಎ ಮುಗಿಸಿದರು. ದೇಶದಲ್ಲಿಡೇಟಾ ಅನಾಲಿಸಿಸ್ ಪ್ರಾರಂಭಿಸಿದ ಪ್ರಮುಖರಲ್ಲಿ ಅವರೂ ಒಬ್ಬರು. ಸಾರ್ವಜನಿಕ ಸ್ವಾಮ್ಯದ ಪೆಟ್ರೊನೆಟ್‍ ಇಂಡಿಯ ಕಂಪೆನಿಯಲ್ಲಿ ನಿರ್ವಾಹಕ ನಿರ್ದೇಶಕರು ಮತ್ತು ಸಿಇಒ ಆಗಿದ್ದರು. ಐಐಟಿಯಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಬಂಧನವಾಗುವ ಸಮಯದಲ್ಲಿ ಗೋವಾ ಇನ್ಸ್ ಟಿಟ್ಯೂಟ್‍ ಆಫ್ ಮ್ಯಾನೇಜ್‍ಮೆಂಟಿನಲ್ಲಿ ಬಿಗ್ ಡೇಟಾ ಅನಲಿಟಿಕ್ಸ್‌‌ನಲ್ಲಿ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರಾಗಿದ್ದರು.

ಸೂಕ್ಷ್ಮ ಆರೋಗ್ಯ ಪರಿಸ್ಥಿತಿಯ ತೇಲ್ತುಂಬ್ಡೆ ಅವರನ್ನು ಕೋವಿಡ್-19ರ ಸೋಂಕು ತಗಲುವ ಸಾಧ್ಯತೆಯಿರುವ ಇಂದಿನ ಸಂದರ್ಭದಲ್ಲಿ, ಜೈಲಲ್ಲಿರುವ ಅಪರಾಧಿಗಳನ್ನೇ ಕೋವಿಡ್-19ರ ಸೋಂಕಿನ ವಾತಾವರಣದಿಂದಾಗಿ ಬಿಡುಗಡೆ ಮಾಡುತ್ತಿರುವ ಈ ಸಂದರ್ಭದಲ್ಲಿ 69 ವರ್ಷದ ಹಿರಿಯರಾದ ತೇಲ್ತುಂಬ್ಡೆ ಅವರನ್ನು ಜೈಲಿಗೆ ಕಳುಹಿಸಿದ್ದು ಕ್ರೌರ್ಯದ ಪರಮಾವಧಿ ಎಂದು ವಿವಿಧ ಸಾಮಾಜಿಕ ಸಂಘಟನೆಗಳ ಮುಖ್ಯಸ್ಥರು ಅಭಿಪ್ರಾಯಪಟ್ಟಿದ್ದಾರೆ.

ಸಮಾಜದ ಅನ್ಯಾಯದ ವಿರುದ್ಧ ಪ್ರತಿಭಟಿಸಿದ್ದಕ್ಕಾಗಿ ಅವರನ್ನು ಬಂಧಿಸಲಾಗಿದ್ದು, ಡಾ. ತೆಲ್ತುಂಬ್ಡೆ, ಜಗತ್ತಿನಾದ್ಯಂತ ಶೋಷಣೆ ಹಾಗೂ ಅನ್ಯಾಯದ ವಿರುದ್ಧದ ದನಿಯನ್ನು ಪ್ರತಿನಿಧಿಸುತ್ತಾರೆ. ಅದರಿಂದಾಗಿಯೇ ಜಿಜ್ಞಾಸುಗಳು, ಚಿಂತಕರು, ಕಲಾವಿದರು, ಕಾರ್ಯಕರ್ತರು, ಮುಖಂಡರು, ಮತ್ತು ನಾಗರಿಕ ಹಕ್ಕುಗಳ ಸಂಘಟನೆಗಳು ಭಾರತದಲ್ಲಿ ಮತ್ತು ವಿದೇಶಗಳಲ್ಲಿ ಅವರ ಬಂಧನದ ವಿರುದ್ಧ ಧ್ವನಿಯೆತ್ತಿದ್ದಾರೆ. ಅವರಲ್ಲಿ ಪ್ರಮುಖರಾದವರು ಅಮ್ನೆಸ್ಟಿ ಇಂಟರ್ ನ್ಯಾಷನಲ್, ಇಂಡಿಯಾ ಸಿವಿಲ್ ವಾಚ್, ರಿಸ್ಕ್ ನೆಟ್ ವರ್ಕನ ವಿದ್ವಾಂಸರುಗಳು, ಪ್ರೊಫೆಸರ್‍ಅಮತ್ರ್ಯ ಸೇನ್, ನೋಮ್‍ಚಾಮ್ಸ್ಕಿ, ಜೀನ್‍ಡ್ರೇಜ್, ಬಿ ಎಲ್ ಮುಂಗೇಕರ್, ಅರುಂಧತಿರಾಯ್, ಅಪರ್ಣಾ ಸೇನ್, ರೋಮಿಲಾಥಾಪರ್, ಪ್ರಭಾತ್ ಪಟ್ನಾಯಕ್, ದೇವಕಿಜೈನ್, ಪ್ರಕಾಶ್‍ಅಂಬೇಡ್ಕರ್, ಮಜದಾರೂವಾಲ ಮುಂತಾದವರು ಸೇರಿದಂತೆ 5000ಕ್ಕೂ ಹೆಚ್ಚು ಪ್ರಜ್ಞಾವಂತ ನಾಗರಿಕರು ದನಿಯೆತ್ತಿದ್ದಾರೆ.

ಇದಕ್ಕೆ ನಾವೂ ಜತೆಗೂಡಬೇಕಾಗಿದೆ ಅದಕ್ಕಾಗಿ ಮೇ 16ನೇ ದಿನವನ್ನು ನ್ಯಾಯ ದಿನವನ್ನಾಗಿ ಆಚರಿಸೋಣ ಎಂದು ಸಲಹೆ ನೀಡುತ್ತೇವೆ. ಡಾ.ತೇಲ್ತುಂಬ್ಡೆ ಮತ್ತು ಅವರೊಡನೆ ಆರೋಪ ಎದುರಿಸುತ್ತಿರುವ ಕಾರ್ಯಕರ್ತರಿಗೆ ನ್ಯಾಯದೊರಕಿಸಲುಒತ್ತಾಯಿಸಲು ಹಾಗೂ ಅವರು ಎತ್ತಿ ಹಿಡಿದ ಒಂದು ನ್ಯಾಯಯುತ ಸಮಾಜದ ವಿಚಾರವನ್ನು ಬೆಂಬಲಿಸಲು ಮೇ 16 ರಂದು ನ್ಯಾಯದ ದಿನವನ್ನಾಗಿ ಆಚರಿಸೋಣ ಎಂದು ಮನವಿ ಮಾಡಿದ್ದಾರೆ.

ಇಂದು ಕೊರೋನಾ ವೈರಾಣುವಿನ ಪಿಡುಗಿನ ಕಾರಣದಿಂದಾಗಿ ಸಾರ್ವಜನಿಕವಾಗಿ ಸೇರುವುದಕ್ಕೆ ನಿರ್ಬಂಧವಿರುವುದರಿಂದ ಮೇ 16 ರ ದಿನವನ್ನು ಕೆಳಕಂಡಂತೆ ಆಚರಿಸಬಹುದೆಂದು ಅವರು ಪ್ರಸ್ತಾಪಿಸಿದ್ದಾರೆ.

ನಮ್ಮ ಎಲ್ಲಾ ಸಾಮಾಜಿಕ ಮಾಧ್ಯಮದ ಪ್ರೊಫೈಲ್ (ಡಿ.ಪಿ.) ಚಿತ್ರವನ್ನು ಮೇ 16 ರಂದು ಡಾ. ತೇಲ್ತುಂಬ್ಡೆಯವರ ಚಿತ್ರವನ್ನು ಹಾಕಿಕೊಳ್ಳೋಣ.ನಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಎರಡು ಗಂಟೆಗಳ ಕಾಲ ಸಂಜೆ 4ರಿಂದ 6ರವರೆಗೆ #ಜಸ್ಟಿಸ್4 ತೆಲ್ತುಂಬ್ಡೆಆಂದೋಲನವನ್ನು ನಡೆಸೋಣ.ವೆಬಿನಾರ್ ಮತ್ತು ವರ್ಚುಯಲ್ ಸಭೆಗಳನ್ನು ಸಂಘಟಿಸಿ ಮೇ ತಿಂಗಳ ಎಲ್ಲಾ ದಿನಗಳಲ್ಲೂ ಡಾ. ತೆಲ್ತುಂಬ್ಡೆಯವರ ಹಾಗೂ ಡಾ.ಬಿ.ಆರ್. ಅಂಬೇಡ್ಕರರನ್ನು ಓದೋಣ ಮತ್ತು ಚರ್ಚಿಸೋಣ ಎಂದು ಮನವಿ ಮಾಡಿದ್ದಾರೆ.

ನ್ಯಾಯ ದಿನವನ್ನು ಆಚರಿಸುವುದರ ಮೂಲಕ ನಮ್ಮ ಸಂವಿಧಾನದ ಮೌಲ್ಯಗಳನ್ನು ಸಮರ್ಥಿಸೋಣ ಮತ್ತು ಪ್ರಜೆಯಾಗಿ ನಮ್ಮಕರ್ತವ್ಯವನ್ನು ನೆರವೇರಿಸೋಣ ಎಂದುರಾಜಮೋಹನ್ ಗಾಂಧೀ (ಬರಹಗಾರರು, ಸಂಶೋಧನಾ ಪ್ರಾಧ್ಯಾಪಕರು, ಯುನಿವರ್‍ಸಿಟಿ ಆಫ್ ಇಲಿಯೋನಿಸ್, ಅರ್ಬನಾ ಕ್ಯಾಂಪೇನ್)ಪ್ರಶಾಂತ್ ಭೂಷಣ್ (ಹಿರಿಯ ವಕೀಲರು, ಸರ್ವೋಚ್ಛ ನ್ಯಾಯಾಲಯ)ಅಡ್ಮಿರಲ್ ರಾಮದಾಸ್ (ನಿವೃತ್ತ ಭಾರತದ ಮುಖ್ಯ ನೌಕಾಧಿಕಾರಿಗಳು)ಅಜಯ್ ಕುಮಾರ್ ಸಿಂಗ್ (ನಿವೃತ್ತ ಡಿಜಿಪಿ & ಐಜಿಪಿ, ಕರ್ನಾಟಕ)
ಆನಂದ್ ಕುಮಾರ್ (ನಿವೃತ್ತ ಜೆಎನ್‍ಯು ಪ್ರಾಧ್ಯಾಪಕರು ಹಾಗೂ ಅಧ್ಯಕ್ಷರು, ಸಿಟಿಜûನ್ ಫಾರ್ ಕಮ್ಯೂನಲ್ ಹಾರ್ಮನಿ)
ಎ.ಎನ್. ಯಲ್ಲಪ್ಪ ರೆಡ್ಡಿ (ಪರಿಸರತಜ್ಘರು, ನಿವೃತ್ತ ಕಾರ್ಯದರ್ಶಿಗಳು, ಪರಿಸರ ಮತ್ತು ಅರಣ್ಯ ಮಂತ್ರಾಲಯ, ಕರ್ನಾಟಕ.
ಅರುಣಾ ರಾಯ್ (ಸಂಸ್ಥಾಪಕರು, ಮಜ್ದೂರ್ ಕಿಸನ್ ಶಕ್ತಿ ಸಂಘಟನ್)ಏಕಾಂತಯ್ಯ (ಹಿರಿಯ ರಾಜಕೀಯ ಮುಖಂಡರು ಹಾಗೂ ಮಾಜಿ ಸಚಿವರು, ಕರ್ನಾಟಕ)ನ್ಯಾಯಮೂರ್ತಿ ಎ.ಪಿ. ಶಾ (ನಿವೃತ್ತ ಮುಖ್ಯ ನ್ಯಾಯಾಧೀಶರು, ದೆಹಲಿ ಉಚ್ಛ ನ್ಯಾಯಾಲಯ ಮತ್ತು ನಿವೃತ್ತ ಮುಖ್ಯಸ್ಥರು, ಲಾ ಕಮೀಷನ್ ಆಫ್ ಇಂಡಿಯಾ)ನ್ಯಾಯಮೂರ್ತಿ ಗೋಪಾಲಗೌಡ (ನಿವೃತ್ತ ನ್ಯಾಯಾಧೀಶರು, ಸರ್ವೋಚ್ಛ ನ್ಯಾಯಲಯ)ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನ್ ದಾಸ್ (ನಿವೃತ್ತ ನ್ಯಾಯಾಧೀಶರು, ಉಚ್ಛ ನ್ಯಾಯಲಯ ಕರ್ನಾಟಕ)
ನ್ಯಾಯಮೂರ್ತಿ ಸುದರ್ಶನ್ ರೆಡ್ಡಿ (ನಿವೃತ್ತ ನ್ಯಾಯಾಧೀಶರು, ಸರ್ವೋಚ್ಛ ನ್ಯಾಯಲಯ)ಕೆ.ಸಿ. ರಘು (ಪೌಷ್ಠಿಕಾಂಶ ತಜ್ಘರು ಮತ್ತು ಕೈಗಾರಿಕೋದ್ಯಮಿ)ಕೋದಂಡರಾಮಯ್ಯ (ನಿವೃತ್ತ ಪೊಲೀಸ್ ಆಯುಕ್ತರು, ಬೆಂಗಳೂರು ನಗರ) ಕೃಷ್ಣ (ಕೆ.ಆರ್. ಪೇಟೆ) (ಮಾಜಿ ಸ್ಪೀಕರ್, ಕರ್ನಾಟಕ ವಿಧಾನಸಭೆ)ಕುಮಾರ್ ಪ್ರಶಾಂತ್ (ಅಧ್ಯಕ್ಷರು, ಗಾಂಧೀ ಪೀಸ್ ಫೌಂಡೇಶನ್)ಮರಿಸ್ವಾಮಿ (ನಿವೃತ್ತ ಪೊಲೀಸ್ ಮಹಾನಿರ್ದೇಶಕರು, ಕರ್ನಾಟಕ)ಎಸ್.ಕೆ. ಕಾಂತ (ಕಾರ್ಮಿಕ ನಾಯಕರು ಮತ್ತು ಮಾಜಿ ಕಾರ್ಮಿಕ ಕಲ್ಯಾಣ ಸಚಿವರು)
ಸುಹಾಸ್ ಪಾಲಶಿಕರ್ (ನಿವೃತ್ತ ಪ್ರಾಧ್ಯಾಪಕರು, ಸಾವಿತ್ರಿಭಾಫುಲೆ ಯೂನಿರ್ವಸಿಟಿ, ಪುಣೆ ಮತ್ತು ಸಂಪಾಕರು, ಸ್ಟಡಿಸ್ ಇನ್ ಇಂಡಿಯನ್ ಪಾಲಿಟಿಕ್ಸ್)ವೈದೇಹಿ (ಬರಹಗಾರರು, ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕøತರು)ವಾಜಾಹತ್ ಹಬಿಬುಲ್ಲಾ (ನಿವೃತ್ತ ಮುಖ್ಯ ಮಾಹಿತಿ ಆಯುಕ್ತರು)ಯೋಗೇಂದ್ರ ಯಾದವ್ (ಅಧ್ಯಕ್ಷರು, ಸ್ವರಾಜ್ ಇಂಡಿಯಾ)ನ್ಯಾಯಮೂರ್ತಿ ಎ.ಜೆ. ಸದಾಶಿವ (ನಿವೃತ್ತ ನ್ಯಾಯಾಧೀಶರು, ಉಚ್ಛ ನ್ಯಾಯಲಯ ಕರ್ನಾಟಕ)ಪ್ರೊ. ರವಿವರ್ಮ ಕುಮಾರ್ (ಹಿರಿಯ ವಕೀಲರು ಹಾಗೂ ಮಾಜಿ ಅಡ್ವೋಕೇಟ್ ಜನರಲ್, ಕರ್ನಾಟಕ)ಸುಗಾತ ರಾಜು (ಹಿರಿಯ ಪತ್ರಕರ್ತರು)ಮಲಯ ಭಟ್ಟಚಾರ್ಯ (ಪ್ರಾಧ್ಯಾಪಕರು, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೆಜ್‍ಮೆಂಟ್ ಬೆಂಗಳೂರು)ಬೆಂಜóವಾಡ ವಿಲ್‍ಸನ್ (ಮ್ಯಾಗ್ಯಾಸ್ಸೆ ಪ್ರಶಸ್ತಿ ಪುರಸ್ಕೃತರು)ತ್ರಿಲೋಚನ ಶಾಸ್ತ್ರಿ (ಪ್ರಾಧ್ಯಾಪಕರು, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೆಜ್‍ಮೆಂಟ್ ಬೆಂಗಳೂರು)ದಿನೇಶ್ ಅಮಿನ್ ಮಟ್ಟು (ಹಿರಿಯ ಪತ್ರಕರ್ತರು)
ಅಭಯ್ (ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ, ಕರ್ನಾಟಕ)ಇಂಧೂಧರ ಹೊನ್ನಾಪುರ (ಹಿರಿಯ ಪತ್ರಕರ್ತರು)ಬಿ.ಟಿ. ವೆಂಕಟೇಶ್ (ಹಿರಿಯ ನ್ಯಾಯವಾದಿಗಳು)ಸಲಿಲ್ ಶೆಟ್ಟಿ (ನಿವೃತ್ತ ಪ್ರಧಾನ ಕಾರ್ಯದರ್ಶಿಗಳು, ಹ್ಯೂಮನ್ ರೈಟ್ಸ್ ಕಮೀಷನ್, ಅಮ್ನೆಸ್ಟಿ ಇಂಟರ್ ನ್ಯಾಷನಲ್)ಎಸ್. ಆರ್. ಹಿರೇಮಠ್ (ರಾಷ್ಟ್ರೀಯಧ್ಯಕ್ಷರು, ಸಿಟಿಜóನ್ ಫಾರ್ ಡೆಮಾಕ್ರೆಸಿ)ದೇವನೂರ ಮಹಾದೇವ (ಬರಹಗಾರರು, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT