ಇದು ಪ್ರಾಥಮಿಕ ವರದಿಯಾಗಿದ್ದು ಅದರ ಆಧಾರದ ಮೇಲೆ ಯಾವುದೇ ತೀರ್ಮಾನ ತೆಗೆದುಕೊಳ್ಳಲು ಆಗುವುದಿಲ್ಲ. ಪೈಲಟ್‌ಗಳ ಸಂಭಾಷಣೆಯು ಸಂಕ್ಷಿಪ್ತವಾಗಿ ಇರುವುದರಿಂದ ಅದರ ಆಧಾರದ ಮೇಲೂ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ. ಈ ಬಗ್ಗೆ ಪೂರ್ಣ ತನಿಖಾ ವರದಿಗಾಗಿ ನಿರೀಕ್ಷಿಸುತ್ತಿದ್ದೇವೆ
–ಮುರಳೀಧರ್ ಮೊಹೋಲ್, ಕೇಂದ್ರ ವಿಮಾನಯಾನ ರಾಜ್ಯ ಸಚಿವ
ಎಎಐಬಿ ತನಿಖಾ ತಂಡ ಮತ್ತು ಇತರ ಅಧಿಕಾರಿಗಳೊಂದಿಗೆ ತನಿಖೆಗೆ ಸಂಪೂರ್ಣ ಸಹಕಾರ ಮುಂದುವರಿಸುತ್ತೇವೆ.
–ಏರ್ ಇಂಡಿಯಾ
ವಿಮಾನ ದುರಂತದ ತನಿಖೆಗೆ ಎಲ್ಲ ರೀತಿಯ ಸಹಕಾರ ನೀಡುತ್ತೇವೆ ಮತ್ತು ನಮ್ಮ ಗ್ರಾಹಕರನ್ನು ಬೆಂಬಲಿಸುವುದನ್ನು ಮುಂದುವರಿಸುತ್ತೇವೆ.