ಮುಂಬೈ: ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಗಾಲಿಯೊಂದು (ನೋಸ್ ವೀಲ್) ಕಳಚಿದ ಹಿನ್ನೆಲೆಯಲ್ಲಿ ಏರ್ ಆಂಬುಲೆನ್ಸ್‌ವೊಂದು, ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಗುರುವಾರ ರಾತ್ರಿ ತುರ್ತು ಭೂಸ್ಪರ್ಶ ಮಾಡಿತು.

ಗಾಲಿ ಕಳಚಿದ ಕೂಡಲೇ ಮುಂಬೈನ ವಿಮಾನ ನಿಲ್ದಾಣ ಸಿಬ್ಬಂದಿಗೆ ಪೈಲಟ್ ಸೂಚನೆ ನೀಡಿದ್ದಾರೆ. ರಕ್ಷಣಾ ತಂಡಗಳು, ವೈದ್ಯರು, ಸಿಐಎಸ್‌ಎಫ್ ಸಿಬ್ಬಂದಿ ಸೇರಿದಂತೆ ಭಾರಿ ಮುನ್ನೆಚ್ಚರಿಕೆಯ ಸಿದ್ಧತೆಯೊಂದಿಗೆ ಏರ್ ಆಂಬುಲೆನ್ಸ್ ಅನ್ನು ಸುರಕ್ಷಿತವಾಗಿ ಇಳಿಸಲಾಯಿತು. ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಜೆಟ್ ಸರ್ವ್ ಕಂಪನಿಗೆ ಸೇರಿದ ಈ ಏರ್ ಆಂಬುಲೆನ್ಸ್ ನಾಗಪುರದಿಂದ ಹೈದರಾಬಾದ್‌ಗೆ ಹೊರಟಿತ್ತು. ಇದರಲ್ಲಿ ಇಬ್ಬರು ಸಿಬ್ಬಂದಿ, ವೈದ್ಯ, ಪ್ಯಾರಾಮೆಡಿಕಲ್ ಸಿಬ್ಬಂದಿ ಹಾಗೂ ಒಬ್ಬ ರೋಗಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.