ಕಾಬೂಲ್ (ಎಎಫ್ಪಿ): ಸಂಭವನೀಯ ರಾಕೆಟ್ ದಾಳಿಯ ವಿರುದ್ಧ ರಕ್ಷಣೆ ಕ್ರಮವಾಗಿ ಅಫ್ಗಾನಿಸ್ತಾನದ ಕಾಬೂಲ್ ವಿಮಾನನಿಲ್ದಾಣದಲ್ಲಿ ನೂತನ ವಾಯುರಕ್ಷಣಾ ವ್ಯವಸ್ಥೆ ಅಳವಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೇಶದಾದ್ಯಂತ ತಾಲಿಬಾನ್ ಹಿಡಿತ ಸಾಧಿಸಿರುವ ನಡುವೆಯೇಈ ಕ್ರಮ ಕೈಗೊಳ್ಳಲಾಗಿದೆ.

ಅಮೆರಿಕ ಮತ್ತು ಅದರ ಮೈತ್ರಿ ದೇಶಗಳು ಆಫ್ಗಾನಿಸ್ತಾನದ ನೆಲದಿಂದ ತನ್ನ ಸೇನೆಗಳನ್ನು ಹಿಂಪಡೆಯುವ ಪ್ರಕ್ರಿಯೆಯನ್ನು ಆಗಸ್ಟ್ ಅಂತ್ಯದ ವೇಳೆಗೆ ಪೂರ್ಣಗೊಳಿಸಲಿವೆ. ಈ ಮಧ್ಯೆ ಅಫ್ಗಾನಿಸ್ತಾನದ ಶೇ 85ರಷ್ಟು ಭಾಗವನ್ನು ಆಕ್ರಮಿಸಿರುವುದಾಗಿ ತಾಲಿಬಾನ್ ಹೇಳಿಕೊಂಡಿದೆ. ಆದರೆ, ಇದನ್ನು ಸರ್ಕಾರ ಅಲ್ಲಗಳೆದಿದೆ.

ಹೊಸದಾಗಿ ಸ್ಥಾಪಿಸಲಾಗಿರುವ ವಾಯುರಕ್ಷಣಾ ವ್ಯವಸ್ಥೆಯು ಕಾಬೂಲ್ನಲ್ಲಿ ಭಾನುವಾರದಿಂದ ಕಾರ್ಯಾರಂಭ ಮಾಡಿದೆ.ರಾಕೆಟ್ ಮತ್ತು ಕ್ಷಿಪಣಿ ದಾಳಿ ತಡೆಯಲು ಇದು ಸಹಕಾರಿ ಎಂದು ಅಧಿಕಾರಿಗಳು ಪ್ರತಿಪಾದಿಸಿದ್ದಾರೆ.

ಆಂತರಿಕ ರಕ್ಷಣಾ ಸಚಿವಾಲಯದ ವಕ್ತಾರ ತಾರಿಖ್ ಅರಿಯನ್ ಅವರು, ವಿಮಾನನಿಲ್ದಾಣದಲ್ಲಿ ಹೊಸ ವ್ಯವಸ್ಥೆ ಅಳವಡಿಸಲಾಗಿದೆ ಎಂದು ತಿಳಿಸಿದ್ದು ಅದರ ಕಾರ್ಯವೈಖರಿ ಮತ್ತು ಸ್ವರೂಪವನ್ನು ವಿವರಿಸಲು ನಿರಾಕರಿಸಿದರು.

ಇಸ್ಲಾಮಿಕ್ ಮೂಲಭೂತವಾದಿ ಸಂಘಟನೆಯು ಇತ್ತೀಚಿನ ದಿನಗಳಲ್ಲಿ ರಾಜಧಾನಿ ಕಾಬೂಲ್ ಮತ್ತು ಇಲ್ಲಿನ ವಿಮಾನನಿಲ್ದಾಣದಲ್ಲಿ ಭೀತಿಯ ವಾತಾವರಣವನ್ನು ಮೂಡಿಸಿದೆ. ವಿದೇಶಗಳ ರಾಜತಾಂತ್ರಿಕರು ಮತ್ತುt ಸಿಬ್ಬಂದಿ ಸುರಕ್ಷಿತವಾಗಿ ಹೊರಹೋಗಲು ನಿರ್ಗಮನ ಮಾರ್ಗದಲ್ಲಿ ‘ನ್ಯಾಟೊ‘ ಅಗತ್ಯ ಕ್ರಮವನ್ನು ಕೈಗೊಂಡಿದೆ.

ದೇಶದಾದ್ಯಂತ ತಾಲಿಬಾನ್ ಇತ್ತೀಚಿನ ದಿನಗಳಲ್ಲಿ ಆಗಾಗ್ಗೆ ರಾಕೆಟ್ ದಾಳಿಯನ್ನು ನಡೆಸುತ್ತಿದೆ. ಇಂಥದ್ದೇ ದಾಳಿಯನ್ನು ಇಸ್ಲಾಮಿಕ್ ಸ್ಟೇಟ್ ಗ್ರೂಪ್ (ಐಎಸ್) ಕೂಡಾ 2020ರಲ್ಲಿ ನಡೆಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.