ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಷ್ಯಾದಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದ ಏರ್‌ ಇಂಡಿಯಾ ವಿಮಾನ ಫ್ರಾನ್ಸಿಸ್ಕೊದತ್ತ

Published 8 ಜೂನ್ 2023, 3:09 IST
Last Updated 8 ಜೂನ್ 2023, 3:09 IST
ಅಕ್ಷರ ಗಾತ್ರ

ಮುಂಬೈ: ದೆಹಲಿಯಿಂದ ಸ್ಯಾನ್‌ ಫ್ರಾನ್ಸಿಸ್ಕೊಗೆ ಹೊರಟಿದ್ದ ಏರ್‌ ಇಂಡಿಯಾ ವಿಮಾನವು ರಷ್ಯಾದ ಮಗದನ್‌ ಎಂಬಲ್ಲಿ ತುರ್ತು ಭೂಸ್ಪರ್ಶ ಮಾಡಿತ್ತು. ಇದೀಗ ಎಂಜಿನ್‌ ದೋಷವನ್ನು ಸರಿಪಡಿಸಿದ ನಂತರ 232 ಪ್ರಯಾಣಿಕರೊಂದಿಗೆ ಸ್ಯಾನ್‌ ಫ್ರಾನ್ಸಿಸ್ಕೊಗೆ ಗುರುವಾರ ಹೊರಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೆಹಲಿಯಿಂದ ಸ್ಯಾನ್‌ ಫ್ರಾನ್ಸಿಸ್ಕೊಗೆ ಹೊರಟಿದ್ದ ಎಐ173 ವಿಮಾನವು ಇಂಜಿನ್‌ ದೋಷದಿಂದಾಗಿ ಮಂಗಳವಾರ ರಷ್ಯಾದ ಮಗದನ್‌ ಎಂಬಲ್ಲಿ ತುರ್ತು ಭೂಸ್ಪರ್ಶ ಮಾಡಿತ್ತು ಎಂದು ಏರ್‌ ಇಂಡಿಯಾ ಒಡೆತನದ ಟಾಟಾ ಗ್ರೂಪ್‌ ಹೇಳಿಕೆಯಲ್ಲಿ ತಿಳಿಸಿದೆ.

216 ಪ್ರಯಾಣಿಕರು ಮತ್ತು 16 ಸಿಬ್ಬಂದಿಯನ್ನು ಹೊತ್ತ ಬೋಯಿಂಗ್‌ 777–200 LRವಿಮಾನವು ಸುರಕ್ಷಿತವಾಗಿ ಲ್ಯಾಂಡ್‌ ಆಗಿತ್ತು. ಇದೀಗ ರಷ್ಯಾದ ಮಗದನ್‌ನಿಂದ ವಿಮಾನ AI173D ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿಯೊಂದಿಗೆ ಸ್ಯಾನ್‌ ಫ್ರಾನ್ಸಿಸ್ಕೊಗೆ ಹೊರಡಲಿದೆ ಎಂದು ಗುರುವಾರ ಏರ್‌ ಇಂಡಿಯಾದ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ಎಲ್ಲಾ ಪ್ರಯಾಣಿಕರು ಸ್ಯಾನ್‌ ಫ್ರಾನ್ಸಿಸ್ಕೊಗೆ ತಲುಪಿದ ನಂತರ ಕ್ಲಿಯರೆನ್ಸ್‌ ಫಾರ್ಮಾಲಿಟಿಗಳನ್ನು ಕೈಗೊಳ್ಳಲು ಏರ್‌ ಇಂಡಿಯಾ ಸ್ಯಾನ್‌ ಫ್ರಾನ್ಸಿಸ್ಕೊನಲ್ಲಿ ಹೆಚ್ಚುವರಿ ಆನ್‌–ಗ್ರೌಂಡ್‌ ಬೆಂಬಲವನ್ನು ಸಜ್ಜುಗೊಳಿಸಿದೆ. ಸ್ಯಾನ್‌ ಫ್ರಾನ್ಸಿಸ್ಕೊನಲ್ಲಿನ ತಂಡವು ಪ್ರಯಾಣಿಕರಿಗೆ ವೈದ್ಯಕೀಯ ಸೇವೆ ಮಾತ್ರವಲ್ಲದೆ ಅಗತ್ಯವಿರುವ ಎಲ್ಲಾ ಸಹಾಯವನ್ನು ಒದಗಿಸಲು ಸಿದ್ಧವಾಗಿದೆ ಎಂದು ಏರ್‌ ಇಂಡಿಯಾ ಅಧಿಕಾರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT