ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾರ್ಜಾದಿಂದ 200 ಭಾರತೀಯರ ಕರೆತರಲಿದೆ ಏರ್ ಇಂಡಿಯಾ ವಿಮಾನ

Last Updated 8 ಮೇ 2020, 11:02 IST
ಅಕ್ಷರ ಗಾತ್ರ

ಲಖನೌ: ಏರ್ ಇಂಡಿಯಾ ವಿಮಾನದ ಮೂಲಕ ಶಾರ್ಜಾದಿಂದ ಸುಮಾರು 200 ಭಾರತೀಯರು ಶನಿವಾರ ಲಖನೌಗೆ ಬರಲಿದ್ದಾರೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

‘200 ಪ್ರಯಾಣಿಕರನ್ನೊಳಗೊಂಡ ಏರ್‌‌ ಇಂಡಿಯಾ ವಿಮಾನವು ಶನಿವಾರ ರಾತ್ರಿ 8ರಿಂದ 8.30ರ ನಡುವೆ ಶಾರ್ಜಾದಿಂದ ಲಖನೌಗೆ ಬರುವ ನಿರೀಕ್ಷೆ ಇದೆ’ ಎಂದು ‘ಚೌಧರಿ ಚರಣ್ ಸಿಂಗ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ’ದ ನಿರ್ದೇಶಕ ಎ.ಕೆ. ಶರ್ಮಾ ಶುಕ್ರವಾರ ಮಾಹಿತಿ ನೀಡಿದ್ದಾರೆ.

ವಿದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ಮೇ 7ರಿಂದ ಹಂತಹಂತವಾಗಿ ವಾಪಸ್ ಕರೆಸಿಕೊಳ್ಳುವುದಾಗಿ ಕೇಂದ್ರ ಸರ್ಕಾರ ಸೋಮವಾರ ಹೇಳಿತ್ತು.ಲಾಕ್‌ಡೌನ್‌ನಿಂದಾಗಿ ವಿದೇಶದಲ್ಲಿ ಸಿಲುಕಿರುವ ಸುಮಾರು 15 ಸಾವಿರ ಭಾರತೀಯ ಪ್ರಜೆಗಳನ್ನು ಮರಳಿ ತಾಯ್ನಾಡಿಗೆ ಕರೆತರಲು ಮೇ 7ರಿಂದ 13ರವರೆಗೆ ಏರ್‌ ಇಂಡಿಯಾದ 64 ವಿಮಾನಗಳು ಕಾರ್ಯನಿರ್ವಹಿಸಲಿವೆ ಎಂದೂ ಸರ್ಕಾರ ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT