ಮುಂಬೈ: ಏರ್ ಇಂಡಿಯಾದ ದೆಹಲಿ–ಲಂಡನ್ ವಿಮಾನದ ಕ್ಯಾಪ್ಟನ್ ಅರವಿಂದ್ ಕಠ್ಪಲಿಯಾ, ವಿಮಾನ ಪ್ರಯಾಣಕ್ಕೂ ಮುನ್ನ ನಡೆದ ಉಸಿರು ಪರೀಕ್ಷೆಯಲ್ಲಿ ನಪಾಸಾಗಿದ್ದಾರೆ.

ವಿಮಾನ ಹಾರಾಟಕ್ಕೂ ಮುನ್ನ ಪೈಲಟ್‌ಗಳು ಮದ್ಯಸೇವನೆ ಮಾಡಿರದ ಬಗ್ಗೆ ದೃಢೀಕರಿಸಿಕೊಳ್ಳಲು ಉಸಿರು ಪರೀಕ್ಷೆ ನಡೆಸಲಾಗುತ್ತದೆ. ಭಾನುವಾರ ಮಧ್ಯಾಹ್ನ 2:45ಕ್ಕೆ ದೆಹಲಿಯಿಂದ ಲಂಡನ್‌ಗೆ ಪ್ರಯಾಣಿಸಬೇಕಿದ್ದ ಎಐ–111 ವಿಮಾನದ ಪೈಲಟ್ ಅರವಿಂದ್‌ಗೆ ವಿಮಾನ ಸಂಸ್ಥೆಯ ಅಧಿಕಾರಿಗಳು ಎರಡು ಬಾರಿ ಪರೀಕ್ಷೆ ತೆಗೆದುಕೊಳ್ಳಲು ಅವಕಾಶ ನೀಡಿದ್ದು, ಎರಡೂ ಸಲ ಪರೀಕ್ಷೆಯಲ್ಲಿ ವಿಫಲರಾಗಿದ್ದಾರೆ. ಅವರನ್ನು ತಕ್ಷಣವೇ ಸೇವೆಯಿಂದ ಬಿಡುವು ಗೊಳಿಸಲಾಗಿದೆ.

ಬದಲಿ ಪೈಲಟ್ ನಿಯೋಜನೆಗಾಗಿ ಸಮಯ ತೆಗೆದುಕೊಂಡಿದ್ದು, ವಿಮಾನ ಪ್ರಯಾಣ ತಡವಾಗಿದೆ.

2017ರಲ್ಲೂ ಕ್ಯಾಪ್ಟನ್ ಅರವಿಂದ್ ಸುದ್ದಿಯಾಗಿದ್ದರು. ನವದೆಹಲಿ–ಬೆಂಗಳೂರು ವಿಮಾನ ಹಾರಾಟ ನಡೆಸಿದ್ದ ಅರವಿಂದ್, ಜನವರಿ 19ರಂದು ಪೈಲಟ್‌ಗಳಿಗೆ ಕಡ್ಡಾಯವಾಗಿರುವ ಉಸಿರು ಪರೀಕ್ಷೆ ತೆಗೆದುಕೊಳ್ಳದೆಯೇ ವಿಮಾನ ಹಾರಾಟ ನಡೆಸಿದ್ದರು. ಈ ಬಗ್ಗೆ ಭಾರತೀಯ ಪೈಲಟ್ಸ್ ಅಸೋಸಿಯೇಷನ್ ದೂರು ದಾಖಲಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.