ಮುಂಬೈ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ನಿಧನಕ್ಕೆ ಡಿಸಿಎಂ ಏಕನಾಥ ಶಿಂಧೆ ಅವರು ಬುಧವಾರ ಸಂತಾಪ ವ್ಯಕ್ತಪಡಿಸಿದ್ದಾರೆ.

ಅಜಿತ್ ಪವಾರ್ ಅವರು ಸಚಿವ ಸಂಪುಟದಲ್ಲಿ ನನಗೆ ಸಹದ್ಯೋಗಿಯಾಗಿದ್ದವರು, 2022ರಲ್ಲಿ ನಾನು ಮುಖ್ಯಮಂತ್ರಿಯಾಗಿದ್ದಾಗ ಅವರು ಉಪಮುಖ್ಯಮಂತ್ರಿಯಾಗಿದ್ದರು. ಅವರ ನಿಧನದಿಂದ ನಾನು ಹಿರಿಯಣ್ಣನನ್ನು ಕಳೆದುಕೊಂಡಂತಾಗಿದೆ ಎಂದು ಏಕನಾಥ ಶಿಂಧೆ ಭಾವುಕರಾಗಿದ್ದಾರೆ.

ಬುಧವಾರ ಮುಂಜಾನೆ ಬಾರಾಮತಿ ಬಳಿ ಜರುಗಿದ ವಿಮಾನ ದುರಂತದಲ್ಲಿ ಅಜಿತ್ ಪವಾರ್(66) ಸೇರಿದಂತೆ ಐದು ಜನರು ಮೃತಪಟ್ಟಿದ್ದಾರೆ.

‘ಇದು ತುಂಬಾ ನೋವಿನ ಸಂಗತಿ. ಪವಾರ್ ಸಾವು, ಕೇವಲ ಅವರ ಕುಟುಂಬಕ್ಕೆ ಉಂಟಾದ ನಷ್ಟವಲ್ಲ, ಇಡೀ ರಾಜ್ಯಕ್ಕಾದ ನಷ್ಟ. ಇದು ಮಹಾರಾಷ್ಟ್ರದ ಇತಿಹಾಸದಲ್ಲೇ ಕರಾಳ ದಿನವಾಗಿದೆ. ವಿಮಾನ ದುರಂತದ ಕಾರಣದ ಕುರಿತು ನಿಖರವಾಗಿ ತಿಳಿದುಬಂದಿಲ್ಲ. ಅದರ ಕುರಿತು ಸಂಪೂರ್ಣ ತನಿಖೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಅಜಿತ್ ಪವಾರ್ ಅವರು ದೂರದೃಷ್ಠಿಯುಳ್ಳ ಉತ್ತಮ ನಾಯಕರಾಗಿದ್ದರು. ಅವರಿಗೆ ರಾಜಕೀಯದಲ್ಲಿ ಅನುಭವ ಮತ್ತು ಆಡಳಿತದ ಮೇಲೆ ಬಿಗಿಹಿಡಿತವಿತ್ತು. ರಾಜ್ಯದ ಅಭಿವೃದ್ದಿಗೆ ಅವರು ಅಪಾರ ಕೊಡುಗೆ ನೀಡಿದ್ದಾರೆ ಎಂದು ಹೇಳಿದ್ದಾರೆ.
.ವಿಮಾನ ದುರಂತದಲ್ಲಿ ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಸಾವು.ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಸಾವು: ಪ್ರಧಾನಿ ಮೋದಿ ಸೇರಿ ಗಣ್ಯರ ಸಂತಾಪ.ಹಲವು ಬಾರಿ ಸ್ಫೋಟ, ಭಾರಿ ಬೆಂಕಿ: ಪವಾರ್ ವಿಮಾನ ಪತನದ ಬಗ್ಗೆ ಪ್ರತ್ಯಕ್ಷದರ್ಶಿ.ಅಜಿತ್ ಪವಾರ್ ಪ್ರಯಾಣಿಸುತ್ತಿದ್ದ ವಿಮಾನ ಛಿದ್ರ ಛಿದ್ರ..ಇಲ್ಲಿವೆ ಭೀಕರ ದೃಶ್ಯಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.