ನವದೆಹಲಿ: ಕಳೆದ ತಿಂಗಳು ಬಾರಾಮತಿಯಲ್ಲಿ ಪತನಗೊಂಡ ಲಾರ್ಜೆಟ್ 45 ವಿಮಾನದ ಕಾಕ್ಪಿಟ್ ವಾಯ್ಸ್ ರೆಕಾರ್ಡರ್ನ (ಸಿವಿಆರ್) ದತ್ತಾಂಶ ಮರಳಿಪಡೆಯಲು ವಿಶೇಷ ನೆರವು ಕೊರಲಾಗಿದೆ ಎಂದು ವಿಮಾನ ಅಪಘಾತ ತನಿಖಾ ಬ್ಯೂರೋ (ಎಎಐಬಿ) ಮಂಗಳವಾರ ಹೇಳಿದೆ.
.ಅಜಿತ್ ಪವಾರ್ ವಿಮಾನ ದುರಂತ ಪಿತೂರಿಯ ಭಾಗವಾಗಿರಬಹುದು: ರೋಹಿತ್ ಪವಾರ್ ಅನುಮಾನ.
ಜನವರಿ 28ರಂದು ವಿಎಸ್ಆರ್ ವೆಂಚರ್ಸ್ ಒಡೆತನದ ಈ ವಿಮಾನ ಪತನಗೊಂಡು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಹಾಗೂ ಇತರ ನಾಲ್ವರು ಮೃತಪಟ್ಟಿದ್ದರು.

ಅಪಘಾತಕ್ಕೀಡಾದ ವಿಮಾನದಲ್ಲಿ ಎರಡು ಫ್ಲೈಟ್ ರೆಕಾರ್ಡರ್ಗಳು (ಕಪ್ಪು ಪೆಟ್ಟಿಗೆಗಳು) ಇದ್ದವು. ಅಪಘಾತದ ಸಮಯದಲ್ಲಿ ಎರಡೂ ರೆಕಾರ್ಡರ್ಗಳು ಬೆಂಕಿಯ ತೀವ್ರ ಹಾನಿಗೊಳಗಾಗಿವೆ ಎಂದು ಎಎಐಬಿ ಹೇಳಿದೆ.
.ಅಜಿತ್ ಪವಾರ್ ಸಾವು: ವಿಮಾನ ದುರಂತದ ಬಗ್ಗೆ ತನಿಖೆಗೆ ಕರ್ನಾಟಕ ಎನ್ಸಿಪಿ ಆಗ್ರಹ.
L3-ಕಮ್ಯುನಿಕೇಷನ್ಸ್ ಸಂಸ್ಥೆ ತಯಾರಿಸಿದ ಡಿಜಿಟಲ್ ಫ್ಲೈಟ್ ಡೇಟಾ ರೆಕಾರ್ಡರ್ ಅನ್ನು ಅದರ ಫ್ಲೈಟ್ ರೆಕಾರ್ಡರ್ ಪ್ರಯೋಗಾಲಯದಲ್ಲಿ ಯಶಸ್ವಿಯಾಗಿ ಡೌನ್ಲೋಡ್ ಮಾಡಲಾಗಿದೆ. ಹನಿವೆಲ್ ಸಂಸ್ಥೆ ತಯಾರಿಸಿರುವ ಕಾಕ್ಪಿಟ್ ವಾಯ್ಸ್ ರೆಕಾರ್ಡರ್ ಅನ್ನು ವಿವರವಾದ ತಾಂತ್ರಿಕ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ದತ್ತಾಂಶ ಮರುಪಡೆಯಲು ವಿಮಾನ ತಯಾರಿಸಲಾದ ದೇಶದ ಮಾನ್ಯತೆ ಪಡೆದ ಪ್ರತಿನಿಧಿಯ ಸಹಾಯ ಕೋರಲಾಗಿದೆ ಎಂದು ಸಂಸ್ಥೆ ತಿಳಿಸಿದೆ.

ಅಪಘಾತಕ್ಕೀಡಾದ ವಿಮಾನ ಅಮೆರಿಕದಲ್ಲಿ ತಯಾರಾಗಿತ್ತು.
.ಮೇಲ್ದರ್ಜೆಗೇರಿಸೋ ಕನಸು ಕಂಡಿದ್ದ ವಿಮಾನ ನಿಲ್ದಾಣದಲ್ಲೇ ಪ್ರಾಣಬಿಟ್ಟ ಅಜಿತ್ ಪವಾರ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.