ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಆಕಾಸಾ ಏರ್‌: ಕ್ಯಾಬಿನ್‌ನೊಳಗೆ ಸಾಕುಪ್ರಾಣಿಗೂ ಅನುಮತಿ

Last Updated 6 ಅಕ್ಟೋಬರ್ 2022, 13:45 IST
ಅಕ್ಷರ ಗಾತ್ರ

ನವದೆಹಲಿ: ಆಕಾಸಾ ಏರ್‌ ವಿಮಾನಯಾನ ಕಂಪನಿಯು ಸಾಕುನಾಯಿ ಮತ್ತು ಬೆಕ್ಕುಗಳನ್ನು ವಿಮಾನದ ಕ್ಯಾಬಿನ್‌ನೊಳಗೆ ಕೊಂಡೊಯ್ಯಲು ನವೆಂಬರ್‌ನಿಂದ ಅನುವು ಮಾಡಿಕೊಡಲಿದೆ.

ಈ ಸಂಬಂಧ ಬುಕ್ಕಿಂಗ್‌ಗಳು ಅಕ್ಟೋಬರ್‌ 15ರಿಂದ ಆರಂಭಗೊಳ್ಳಲಿವೆ. ಸಾಕು ಪ್ರಾಣಿಗಳು ಗೂಡಿನೊಳಗಿರಬೇಕು ಮತ್ತು ಅವುಗಳ ಭಾರವು ಗೂಡು ಸೇರಿದಂತೆ 7 ಕೆ.ಜಿ.ಯೊಳಗಿರಬೇಕು ಎಂದು ಕಂಪನಿಯ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

ಕಂಪನಿಯ ಕಾರ್ಯನಿರ್ವಹಣೆಯು ಮೊದಲ 60 ದಿನಗಳಲ್ಲಿ ತೃಪ್ತಿ ತಂದಿದೆ. ಶುಕ್ರವಾರ ದೆಹಲಿಯಿಂದ ಸೇವೆ ಆರಂಭಿಸಲಿದ್ದೇವೆ. ನವೆಂಬರ್‌ನಿಂದ ಸರಕು ಸೇವೆ ಕೂಡ ಆರಂಭವಾಗಲಿದೆ ಎಂದು ಸಂಸ್ಥೆಯ ಸಂಸ್ಥಾಪಕ ಮತ್ತು ಸಿಇಒ ವಿನಯ್‌ ದುಬೆ ತಿಳಿಸಿದ್ದಾರೆ.

2023ರ ದ್ವಿತೀಯಾರ್ಧದಲ್ಲಿ ಅಂತರರಾಷ್ಟ್ರೀಯ ಸೇವೆಗಳನ್ನು ಆರಂಭಿಸಲು ಚಿಂತನೆ ನಡೆಸಿದ್ದೇವೆ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT