ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಐಟಿಯಿಂದ ನಟ ಅಕ್ಷಯ್‌ ವಿಚಾರಣೆ

Last Updated 21 ನವೆಂಬರ್ 2018, 20:00 IST
ಅಕ್ಷರ ಗಾತ್ರ

ಚಂಡೀಗಡ:2015ರಲ್ಲಿ ಪಂಜಾಬ್‌ನ ಫರೀದ್‌ಕೋಟ್‌ನಲ್ಲಿ ನಡೆದ ಪೊಲೀಸ್‌ ಫೈರಿಂಗ್‌ನಲ್ಲಿ ಇಬ್ಬರು ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಎಸ್‌ಐಟಿ ಮುಂದೆ ಬಾಲಿವುಡ್‌ ನಟ ಅಕ್ಷಯ್‌ಕುಮಾರ್‌ ಬುಧವಾರ ಹಾಜರಾದರು.

ಎರಡು ಗಂಟೆ ಕಾಲ ಅಕ್ಷಯ್‌ ಕುಮಾರ್‌ ಅವರನ್ನು ವಿಚಾರಣಗೆ ಒಳಪಡಿಸಿದ ಎಸ್‌ಐಟಿ ಅಧಿಕಾರಿಗಳು, ಒಟ್ಟು 42 ಪ್ರಶ್ನೆಗಳನ್ನು ಕೇಳಿದರು.

ಸಿಖ್ಖರ ಪವಿತ್ರ ಗ್ರಂಥ ಗುರು ಗ್ರಂಥ ಸಾಹಿಬ್‌ಗೆ ಅವಮಾನಿಸಲಾಗಿದೆ ಎಂದು ಆರೋಪಿಸಿ ಫರೀದ್‌ಕೋಟ್‌ನಲ್ಲಿ ಸಿಖ್ಖ ಸಮುದಾಯ ಪ್ರತಿಭಟಿಸಿತ್ತು. ಆಗ ನಡೆದ ಪೊಲೀಸ್‌ ಫೈರಿಂಗ್‌ನಲ್ಲಿ ಇಬ್ಬರು ಮೃತಪಟ್ಟಿದ್ದರು. ಈ ಘಟನೆ ಕುರಿತಂತೆ ತನಿಖೆ ನಡೆಸಲು ನಿವೃತ್ತ ನ್ಯಾಯಮೂರ್ತಿ ರಂಜಿತ್‌ ಸಿಂಗ್‌ ಆಯೋಗವನ್ನು ರಚಿಸಲಾಗಿತ್ತು.

ಫೈರಿಂಗ್‌ ಘಟನೆಗೂ ಅಕ್ಷಯ್‌ಕುಮಾರ್‌ಗೂ ಯಾವುದೇ ಸಂಬಂಧ ಇರದಿದ್ದರೂ, ನ್ಯಾ. ರಂಜಿತ್‌ ಸಿಂಗ್‌ ಆಯೋಗ ನೀಡಿದ್ದ ವರದಿಯಲ್ಲಿ ಅಕ್ಷಯ್‌ ಹೆಸರು ಉಲ್ಲೇಖಿಸಲಾಗಿತ್ತು.

ಜೈಲಿನಲ್ಲಿದ್ದ ಡೇರಾ ಸಚಾ ಸೌದ್‌ ಮುಖ್ಯಸ್ಥ ಗುರ್ಮೀತ್‌ ರಾಮ್‌ ರಹೀಮ್‌ ಸಿಂಗ್‌ ಅವರಿಗೆ ಕ್ಷಮಾದಾನ ನೀಡುವ ಕುರಿತಂತೆ ಚರ್ಚಿಸಲು ಗುರ್ಮೀತ್ ಹಾಗೂ ಆಗಿನ ಉಪಮುಖ್ಯಮಂತ್ರಿ ಸುಖ್‌ಬೀರ್‌ ಸಿಂಗ್‌ ನಡುವೆ ಮಾತುಕತೆಗಾಗಿ ಅಕ್ಷಯ್‌ ತಮ್ಮ ಮನೆಯಲ್ಲಿ ಸಭೆ ನಡೆಸಿದ್ದರು ಎಂದು ಆರೋಪಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT