ಠಾಣೆ(ಮಹಾರಾಷ್ಟ್ರ): ಪೊಲೀಸ್ ಶೂಟೌಟ್‌ನಲ್ಲಿ ಹತ್ಯೆಯಾಗಿದ್ದ, ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಅಕ್ಷಯ್ ಶಿಂದೆ ಅವರ ಅಂತ್ಯಕ್ರಿಯೆ ಪೊಲೀಸ್ ಭದ್ರತೆ ನಡುವೆ ಠಾಣೆ ಜಿಲ್ಲೆಯ ಉಲ್ಲಾಸ್‌ನಗರದಲ್ಲಿ ಭಾನುವಾರ ನೆರವೇರಿತು.
ಶಿಂದೆ ಶವ ಹೂಳುವುದಕ್ಕೆ ಬದ್ಲಾಪುರ, ಕಲ್ಯಾಣ, ಅಂಬರನಾಥ್ ಹಾಗೂ ಉಲ್ಲಾಸನಗರ ಪ್ರದೇಶಗಳಲ್ಲಿ ವಿರೋಧ ವ್ಯಕ್ತವಾಗಿತ್ತು. ಸಂಜೆ ವೇಳೆಗೆ, ಠಾಣೆಯ ಶಾಂತಿನಗರ ಸ್ಮಶಾನದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.