ಭೋಪಾಲ್: ‘ಹೊಸ ಅಬಕಾರಿ ನೀತಿ ಕುರಿತು ಶಿಫಾರಸುಗಳನ್ನು ನೀಡಲು ಮಧ್ಯ ಪ್ರದೇಶ ಸರ್ಕಾರವು ಸಂಪುಟ ಸಮಿತಿಯನ್ನು ರಚಿಸಿದೆ’ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಬಿಜೆಪಿ ಹಿರಿಯ ನಾಯಕಿ ಉಮಾ ಭಾರತಿ ಅವರು ನಿಯಂತ್ರಿತ ಅಬಕಾರಿ ನೀತಿಗಾಗಿ ಆಗ್ರಹ ಮಾಡಿರುವ ಮಧ್ಯೆಯೇ, ಸರ್ಕಾರ ಈ ಸಮಿತಿ ರಚಿಸಿದೆ.

‘ಹೊಸ ನೀತಿಯನ್ನು ಜನವರಿ 31ರಂದೇ ಘೋಷಿಸಬೇಕಿತ್ತು. ಆದರೆ, ಶಾಲೆ ಹಾಗೂ ಇತರೆ ಸಂಸ್ಥೆಗಳ ಸುತ್ತ ಮುತ್ತ ಸುಮಾರು 1 ಕಿ.ಮೀ. ವ್ಯಾಪ್ತಿಯಲ್ಲಿ ಇರುವ ಮದ್ಯದಂಗಡಿಗಳನ್ನು ಮುಚ್ಚುವುದು, ಅಹಾತಾಗಳನ್ನು (ಮದ್ಯ ಮಾರಾಟ ಮಾಡುವುದರ ಜೊತೆಗೆ ಸೇವನೆಗೂ ಅವಕಾಶವಿರುವ ಸ್ಥಳ) ಮುಚ್ಚವುದು ಸೇರಿದಂತೆ ಉಮಾ ಭಾರತಿ ಅವರು ವಿವಿಧ ಬೇಡಿಕೆಗಳನ್ನು ಇರಿಸಿದ್ದರಿಂದ ಈ ಘೋಷಣೆ ವಿಳಂಬವಾಯಿತು’ ಎಂದು ಮೂಲಗಳು ಹೇಳಿವೆ.

ಈ ಸಮಿತಿಯಲ್ಲಿ ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ, ಅರಣ್ಯ ಸಚಿವ ವಿಜಯ್ ಶಾ, ಹಣಕಾಸು ಹಾಗೂ ಅಬಕಾರಿ ಸಚಿವ ಜಗದೀಶ್ ದೇವಡಾ, ನಗರಾಭಿವೃದ್ಧಿ ಸಚಿವ ಭೂಪೇಂದ್ರ ಸಿಂಗ್ ಹಾಗೂ ಆರೋಗ್ಯ ಸಚಿವ ಪ್ರಭೂರಾಮ್ ಚೌಧರಿ ಅವರು ಸದಸ್ಯರಾಗಿರಲಿದ್ದಾರೆ. ವಾಣಿಜ್ಯ ತೆರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಈ ಸಮಿತಿಯ ಕಾರ್ಯದರ್ಶಿಯಾಗಿರಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.