ನಾರಾಯಣಪುರ: ಗಣಿ ಪ್ರದೇಶದಲ್ಲಿ ನಕ್ಸಲರು ಹುದುಗಿಸಿದ್ದ ಕಚ್ಚಾ ಬಾಂಬ್ ಸ್ಫೋಟಿಸಿ ಕಾರ್ಮಿಕನೋರ್ವ ಗಾಯಗೊಂಡ ಘಟನೆ ಛತ್ತೀಸಗಢದ ನಾರಾಯಣಪುರ ಜಿಲ್ಲೆಯಲ್ಲಿ ಬುಧವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
.ಛತ್ತೀಸ್ಗಢ: ಇಬ್ಬರು ನಾಗರಿಕರನ್ನು ಹತ್ಯೆ ಮಾಡಿದ ನಕ್ಸಲರು.
ಛೋಟೆ ಡೊಂಗರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಆಮ್ದಾಯಿ ಘಾಟಿ ಕಬ್ಬಿನದ ಅದಿರು ಗಣಿಗಾರಿಕೆ ಪ್ರದೇಶದಲ್ಲಿ ಬುಧವಾರ ಬೆಳಿಗ್ಗೆ ಘಟನೆ ಸಂಭವಿಸಿದೆ. ಈ ಸ್ಥಳ ರಾಜಧಾನಿ ರಾಯಪುರದಿಂದ 350 ಕಿ.ಮೀ ದೂರದಲ್ಲಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಗಾಯಗೊಂಡ ಕಾರ್ಮಿಕನನ್ನು ಛೋಟೆ ಡೊಂಗರ್ನ ಆಸ್ಪತ್ರೆಯೊಂದಕ್ಕೆ ಸೇರಿಸಲಾಗಿದೆ.

ಘಟನೆ ನಡೆದ ಪ್ರದೇಶದವನ್ನು ಜಯಸ್ವಾಲ್ ನೆಕೊ ಇಂಡಸ್ಟ್ರೀಸ್ ಲಿಮಿಟೆಡ್ಗೆ ಗಣಿಗಾರಿಗೆ ನಡೆಸಲು ನೀಡಲಾಗಿತ್ತು. ಈ ಯೋಜನೆಯನ್ನು ನಕ್ಸಲರು ಹಲವು ವರ್ಷಗಳಿಂದ ವಿರೋಧಿಸುತ್ತಿದ್ದರು.
.ಮಹಾರಾಷ್ಟ್ರ: ಪೊಲೀಸ್ ಮಾಹಿತಿದಾರನೆಂದು ಆರೋಪಿಸಿ ವ್ಯಕ್ತಿಯ ಕೊಂದ ನಕ್ಸಲರು.
2023ರ ನವೆಂಬರ್ನಲ್ಲಿ ಇದೇ ಗಣಿಯಲ್ಲಿ ನಕ್ಸಲರು ಇಟ್ಟಿದ್ದ ಕಚ್ಚಾ ಬಾಂಬ್ ಸ್ಫೋಟಗೊಂಡು ಇಬ್ಬರು ಕಾರ್ಮಿಕರು ಮೃತಪಟ್ಟಿದ್ದರು.
.ಛತ್ತೀಸಗಢ: ತಲೆಗೆ ₹ 32 ಲಕ್ಷ ಬಹುಮಾನವಿದ್ದ 7 ನಕ್ಸಲರು ಶರಣು .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.