ಗಡ್ಚಿರೋಲಿ (ಮಹಾರಾಷ್ಟ್ರ): ಪೊಲೀಸ್ ಮಾಹಿತಿದಾರ ಎಂದು ಆರೋಪಿಸಿ 45 ವರ್ಷದ ವ್ಯಕ್ತಿಯನ್ನು ಮಾವೋವಾದಿಗಳು ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯಲ್ಲಿ ಭಾನುವಾರ ಕೊಲೆ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
.ನಕ್ಸಲ್ ಚಳವಳಿಯಲ್ಲಿ ಸಕ್ರಿಯವಾಗಿದ್ದ ಕೋಟೆಹೊಂಡ ರವೀಂದ್ರ: ಇಂದೇ ಮುಖ್ಯವಾಹಿನಿಗೆ.
ದಕ್ಷಿಣ ಗಡ್ಚಿರೋಲಿಯ ಭಮ್ರಗಡ್ ತಹಸಿಲ್ ವ್ಯಾಪ್ತಿಯ ಕಿಯೆರ್ ಗ್ರಾಮದಲ್ಲಿ ಭಾನುವಾರ ಮುಂಜಾನೆ ಈ ಘಟನೆ ನಡೆದಿದೆ ಎಂದು ಅವರು ತಿಳಿಸಿದ್ದಾರೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಮಾವೋವಾದಿಗಳು ವ್ಯಕ್ತಿಯನ್ನು ಕತ್ತು ಹಿಸುಕಿ ಕೊಂದಿದ್ದಾರೆ. ಕಿಯೆರ್ ಗ್ರಾಮದ ನಿವಾಸಿ ಸುಖರಾಮ್ ಮಾದವಿ ಕೊಲೆಯಾದ ವ್ಯಕ್ತಿ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
.ನಕ್ಸಲ್ ಚಳವಳಿಯಲ್ಲಿ ಸಕ್ರಿಯವಾಗಿದ್ದ ತೊಂಬಟ್ಟು ಲಕ್ಷ್ಮಿ ಶರಣಾಗತಿ ನಾಳೆ .
ಮೃತದೇಹದ ಬಳಿ ಕರಪತ್ರ ಪತ್ತೆಯಾಗಿದ್ದು, ವ್ಯಕ್ತಿ ಪೊಲೀಸ್ ಮಾಹಿತಿದಾರನಾಗಿದ್ದ. ಅಲ್ಲದೆ, ಜಿಲ್ಲೆಯ ಪೆಂಗುಂಡ ಪ್ರದೇಶ ಸೇರಿದಂತೆ ಹಲವು ಕಡೆಗಳಲ್ಲಿ ಹೊಸ ಶಿಬಿರಗಳನ್ನು ತೆರೆಯಲು ಪೊಲೀಸರಿಗೆ ಸಹಾಯ ಮಾಡಿದ್ದಾರೆ ಉಲ್ಲೇಖಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಪತ್ರದಲ್ಲಿರುವ ಆರೋಪ ಸತ್ಯಕ್ಕೆ ದೂರವಾದು ಎಂದೂ ಅವರು ಹೇಳಿದ್ದಾರೆ.

ಈ ವರ್ಷ ಈ ಪ್ರದೇಶದಲ್ಲಿ ಮಾವೋವಾದಿಗಳು ಮಾಡಿದ ಮೊದಲ ನಾಗರಿಕ ಹತ್ಯೆ ಇದಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಘಟನೆಯ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
.ನಕ್ಸಲ್ ವಿರೋಧಿ ಹೇಳಿಕೆ: ಶಾಸಕರಿಗೆ ವಿವೇಕದ ಕೊರತೆ: ಮುಂಡಗಾರು ಚಂದ್ರಪ್ಪ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.