ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಯ ಸಿದ್ಧತೆಗೆ ಎಲ್ಲಾ ಪಕ್ಷಗಳು ರಾಜಕೀಯ ಕಾರ್ಯತಂತ್ರಗಳನ್ನು ರೂಪಿಸುತ್ತಿದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ನರೇಂದ್ರ ಮೋದಿ ಹಾಗೂ ರಾಹುಲ್ ಗಾಂಧಿ ನಡುವಿನ ಸಂಭಾಷಣೆಯ ಇನ್ಫೋಗ್ರಾಫ್ ವಿಡಿಯೊ ಗಮನ ಸೆಳೆದಿದೆ.
नरेंद्र मोदी: मेरे पास ED है, पुलिस है, सत्ता है, पैसा है, दोस्त है.. क्या है तुम्हारे पास?
ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ (ಟ್ವಿಟರ್) ಇನ್ಫೋಗ್ರಾಫ್ ಹಂಚಿಕೊಂಡಿರುವ ಕಾಂಗ್ರೆಸ್, ಮೋದಿ ಅವರೇ, ’ನಿಮ್ಮ ಬಳಿ ಅಧಿಕಾರ, ಹಣ, ಇಡಿ, ಸ್ನೇಹಿತರಿದ್ದಾರೆ. ಆದರೆ ನನ್ನ ಜೊತೆ ಇಡೀ ದೇಶವೇ ಇದೆ ಎಂದು ಹೇಳುವ ಇನ್ಫೋಗ್ರಾಫ್ ದೃಶ್ಯಗಳು’ ವಿಡಿಯೊದಲ್ಲಿದೆ.
राहुल गांधी : मुझे सत्ता चाहिए, किसी भी क़ीमत पर।
मोदी जी : राहुल, भारत की सत्ता और तुम्हारे बीच मेरे 140 करोड़ परिवारजन है। और मैं तुम्हें कभी ये देश नहीं तोड़ने दूँगा। pic.twitter.com/Zqn4BlllQX
ಬಿಜೆಪಿಯೂ ಕೂಡ ಎಕ್ಸ್‌ನಲ್ಲಿ (ಟ್ವಿಟರ್) ಇನ್ಫೋಗ್ರಾಫ್ ವಿಡಿಯೊ ಹಂಚಿಕೊಂಡು, ರಾಹುಲ್ ಗಾಂಧಿ ಅವರೇ, ‘ಅಧಿಕಾರ ಮತ್ತು ಸರ್ಕಾರದ ಮಧ್ಯೆ 140 ಕೋಟಿ ಜನರಿದ್ದಾರೆ. ಯಾವುದೇ ಕಾರಣಕ್ಕೂ ದೇಶ ಹಾಳು ಮಾಡಲು ನಾನು ( ಮೋದಿ) ಬಿಡುವುದಿಲ್ಲ’ ಎಂದು ಹೇಳುತ್ತಿರುವುದು ಇನ್ಫೋಗ್ರಾಫ್ ವಿಡಿಯೊದಲ್ಲಿದೆ.