ಹೈದರಾಬಾದ್: ಕೌಶಲ ಅಭಿವೃದ್ಧಿ ಹಾಗೂ ವೃತ್ತಿಪರ ಶಿಕ್ಷಣಕ್ಕೆ ಒತ್ತು ನೀಡುವ ಸಲುವಾಗಿ ‘ತೆಲಂಗಾಣ ಯಂಗ್ ಇಂಡಿಯಾ ಸ್ಕಿಲ್ಸ್ ವಿಶ್ವವಿದ್ಯಾಲಯ’ ಎನ್ನುವ ನೂತನ ವಿಶ್ವವಿದ್ಯಾಲಯವನ್ನು ಸ್ಥಾಪಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಈ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಮುಖ್ಯಸ್ಥರನ್ನಾಗಿ ಉದ್ಯಮಿ ಆನಂದ ಮಹಿಂದ್ರಾ ಅವರನ್ನು ನೇಮಕ ಮಾಡಲಾಗಿದೆ.
ತೆಲಂಗಾಣ ಮುಖ್ಯಮಂತ್ರಿ ರೇವಂತ ರೆಡ್ಡಿ ಅವರು ಉದ್ಯಮಿ, ಮಹಿಂದ್ರಾ ಸಮೂಹ ಕಂಪನಿಗಳ ಮುಖ್ಯಸ್ಥರಾದ ಆನಂದ್ ಮಹಿಂದ್ರಾ ಅವರನ್ನು ಇತ್ತೀಚೆಗೆ ಭೇಟಿ ಮಾಡಿದ್ದರು. ನೂತನ ವಿಶ್ವವಿದ್ಯಾಲಯದ ಕುರಿತು ಚರ್ಚೆ ನಡೆಸಿ, ಆಡಳಿತ ಮಂಡಳಿಗೆ ಮುಖ್ಯಸ್ಥರಾಗಬೇಕು ಎಂದು ಆನಂದ್ ಅವರಲ್ಲಿ ರೇವಂತ ಅವರು ಮನವಿ ಮಾಡಿದ್ದರು.