ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಡಮಾನ್ ನಿಕೋಬಾರ್‌ನಲ್ಲೂ ಹೆಚ್ಚುತ್ತಿವೆ ಸೈಬರ್ ಕ್ರೈಂ: ಪೊಲೀಸರಿಂದ ಹೊಸ ಹೆಜ್ಜೆ

ತಂತ್ರಜ್ಞಾನ ಬೆಳೆದಂತೆ ಅಂಡಮಾನ್ ನಿಕೋಬಾರ್ ದ್ವೀಪದಲ್ಲೂ ಸೈಬರ್ ಅಪರಾಧಗಳು ಹೆಚ್ಚು ವರದಿಯಾಗುತ್ತಿವೆ.
Published 13 ಏಪ್ರಿಲ್ 2024, 10:29 IST
Last Updated 13 ಏಪ್ರಿಲ್ 2024, 10:29 IST
ಅಕ್ಷರ ಗಾತ್ರ

ಪೋರ್ಟ್ ಬ್ಲೇರ್, ಅಂಡಮಾನ್–ನಿಕೋಬಾರ್: ಕೇಂದ್ರಾಡಳಿತ ಪ್ರದೇಶವಾದ ಅಂಡಮಾನ್ ನಿಕೋಬಾರ್ ದ್ವೀಪಗಳಲ್ಲಿಯೂ ಸೈಬರ್ ಅಪರಾಧಗಳು ಹೆಚ್ಚುತ್ತಿದ್ದು ಈ ನಿಟ್ಟಿನಲ್ಲಿ ಅಲ್ಲಿನ ಪೊಲೀಸರು ಚಾಟ್‌ ಬಾಟ್ ತಂತ್ರಾಂಶದ ಮೊರೆ ಹೋಗಿದ್ದಾರೆ.

ಪೊಲೀಸರು ‘ಐಲ್ಯಾಂಡ್ ಸೈಬರ್ ಸಾಥಿ’ ಎಂಬ ಚಾಟ್ ಬಾಟ್ ಇಂಟರ್‌ನೆಟ್ ತಂತ್ರಾಂಶವನ್ನು ಹೊರ ತಂದಿದ್ದು ಇದರ ಮೂಲಕ ದ್ವೀಪ ಪ್ರದೇಶದ ಜನರು ಸೈಬರ್ ಅಪರಾಧಗಳ ಬಗ್ಗೆ ವರದಿ, ಮಾಹಿತಿ, ಅಲರ್ಟ್, ಪರಿಹಾರ ಹಾಗೂ ಇನ್ನಿತರ ಸೌಲಭ್ಯಗಳನ್ನು ಪಡೆಯಬಹುದು.

ತಂತ್ರಜ್ಞಾನ ಬೆಳೆದಂತೆ ಅಂಡಮಾನ್ ನಿಕೋಬಾರ್ ದ್ವೀಪದಲ್ಲೂ ಸೈಬರ್ ಅಪರಾಧಗಳು ಹೆಚ್ಚು ವರದಿಯಾಗುತ್ತಿವೆ. 2023ರಿಂದ 2024ರ ಮಾರ್ಚ್‌ವರೆಗೆ ಒಟ್ಟು 60 ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿವೆ ಎಂದು ಅಂಡಮಾನ್ ನಿಕೋಬಾರ್ ಡಿಜಿಪಿ ದೇವೇಶ್ ಚಂದ್ರ ಶ್ರೀವಾಸ್ತವ್ ಹೇಳಿದ್ದಾರೆ.

ಸಿಐಡಿ ಎಸ್‌‍.ಪಿ ರಾಜೀವ್ ರಂಜನ್ ಹಾಗೂ ಸೈಬರ್ ಸೆಲ್ ಡಿಸಿಪಿ ಲಕ್ಷ್ಯ ಪಾಂಡೆ ಅವರು ಚಾಟ್ ಬಾಟ್ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ. ನಾಗರಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ ಎಂದು ತಿಳಿಸಿದ್ದಾರೆ.

ಸೈಬರ್ ಸಾಥಿಯನ್ನು ಮೊಬೈಲ್ ಇದ್ದವರು ಯಾರು ಬೇಕಾದರೂ ಬಳಸಬಹುದು. ಈ ಮೂಲಕ ಸೈಬರ್ ವಂಚನೆಗೆ ಒಳಗಾದವರು ನೇರವಾಗಿ ಇದರಲ್ಲಿ ನಮಗೆ ದೂರು ನೀಡಬಹುದು. ಸಲಹೆ–ಸೂಚನೆ ಕೊಡಬಹುದು ಎಂದು ತಿಳಿಸಿದ್ದಾರೆ.

ಈ ತಂತ್ರಾಂಶ ದ್ವೀಪ ಪ್ರದೇಶದ ಜನರಿಗೆ ಸೈಬರ್ ವಂಚನೆಯ ಅಲರ್ಟ್‌ಗಳನ್ನು ರವಾನಿಸುವುದಲ್ಲದೇ ಕಳೆದುಹೋದ ಮೊಬೈಲ್ ಪತ್ತೆ ಹಚ್ಚಲು, ಸ್ಪ್ಯಾಮ್ ಕಾಲ್‌ಗಳ ಬಗ್ಗೆ ಎಚ್ಚರಿಕೆಯನ್ನೂ ನೀಡುತ್ತದೆ ಎಂದು ಅವರು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT