ವೆಟ್ಲಪಾಲೆಂ (ಆಂಧ್ರಪ್ರದೇಶ): ಕಾಕಿನಾಡ ಜಿಲ್ಲೆಯಲ್ಲಿನ ಪಟಾಕಿ ತಯಾರಿಕಾ ಘಟಕವೊಂದ ರಲ್ಲಿ ಶನಿವಾರ ಸ್ಫೋಟ ಸಂಭವಿಸಿದ್ದು, ಒಂಬತ್ತು ಮಹಿಳೆಯರು ಸೇರಿ 20 ಮಂದಿ ಮೃತಪಟ್ಟಿದ್ದಾರೆ.

‘ಒಂಬತ್ತು ಮಂದಿ ಗಂಭೀರವಾಗಿ ಗಾಯ ಗೊಂಡಿದ್ದು, ಸಾವಿನ ಸಂಖ್ಯೆ ಏರಿಕೆಯಾಗಬಹುದು’ ಎಂದು ಆಂಧ್ರ ಪ್ರದೇಶದ ಗೃಹ ಸಚಿವೆ ವಂಗಲಪೂಡಿ ಅನಿತಾ ಅವರು ತಿಳಿಸಿದ್ದಾರೆ.

‘ಸ್ಫೋಟ ಸಂಭವಿಸಿದ ವೇಳೆ 30ಕ್ಕೂ ಹೆಚ್ಚು ಕಾರ್ಮಿಕರು ಘಟಕದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಯಾರೂ ಬದುಕುಳಿಯುವ ಸಾಧ್ಯತೆಗಳಿಲ್ಲ’ ಎಂದು ಸಚಿವ ಕಂಡುಲಾ ದುರ್ಗೇಶ್ ಅವರು ತಿಳಿಸಿದ್ದಾರೆ.

‘ಸ್ಫೋಟದ ತೀವ್ರತೆಯು ಅಧಿಕ ವಾಗಿತ್ತು. ಕೆಲ ಮೃತದೇಹಗಳು ಸಮೀಪದ ಭತ್ತದ ಗದ್ದೆಯಲ್ಲಿ ಪತ್ತೆ ಯಾಗಿವೆ. ಉಳಿದ ಮೃತದೇಹಗಳ ಅವಶೇಷಗಳ ಪತ್ತೆಗಾಗಿ ಡ್ರೋನ್ ಅನ್ನು ಬಳಕೆ ಮಾಡಲಾಗಿತ್ತು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಸ್ಫೋಟಕ್ಕೆ ಕಾರಣವೇನು ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆ
ಯುತ್ತಿರುವವರ ದೇಹಗಳು ಬಹುತೇಕ ಸುಟ್ಟುಹೋಗಿವೆ’ ಎಂದು ತಿಳಿಸಿದರು.

‘ರಕ್ಷಣಾ ಕಾರ್ಯದ ಬಗ್ಗೆ ಮಾಹಿತಿ ಪಡೆಯಲಾಗಿದೆ. ಗಾಯಗೊಂಡವರಿಗೆ ತಕ್ಷಣ ನೆರವು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ‘ಎಕ್ಸ್’ನಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.