ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಕಿತ್ ಸಕ್ಸೇನಾ ಹತ್ಯೆ ಪ್ರಕರಣ: ಶಿಕ್ಷೆ ಪ್ರಮಾಣ ನಿರ್ಣಯ ಜ.31ಕ್ಕೆ ಮುಂದೂಡಿಕೆ

Published 15 ಜನವರಿ 2024, 10:11 IST
Last Updated 15 ಜನವರಿ 2024, 10:11 IST
ಅಕ್ಷರ ಗಾತ್ರ

ನವದೆಹಲಿ: ವೃತ್ತಿಪರ ಛಾಯಾಗ್ರಾಹಕ ಅಂಕಿತ್ ಸಕ್ಸೇನಾ ಅವರನ್ನು ಹತ್ಯೆಗೈದ ಮೂವರು ಅಪರಾಧಿಗಳಿಗೆ ಶಿಕ್ಷೆ ವಿಧಿಸುವ ಕುರಿತಾದ ವಾದ-ವಿವಾದಗಳನ್ನು ದೆಹಲಿ ನ್ಯಾಯಾಲಯ ಜ.31ರಂದು ಆಲಿಸಲಿದೆ

ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಸುನೀಲ್ ಕುಮಾರ್ ಶರ್ಮಾ ಅವರು ಡಿಸೆಂಬರ್ 23ರಂದು ಸಕ್ಸೇನಾ ಅವರ ಗೆಳತಿ ಶೆಹಜಾದಿ ಅವರ ಪೋಷಕರಾದ ಅಕ್ಬರ್ ಅಲಿ ಮತ್ತು ಶಹನಾಜ್ ಬೇಗಂ ಹಾಗೂ ತಾಯಿಯ ಚಿಕ್ಕಪ್ಪ ಮೊಹಮ್ಮದ್ ಸಲೀಂ ಅವರನ್ನು ದೋಷಿಗಳೆಂದು ತೀರ್ಪು ನೀಡಿದ್ದರು.

ಹತ್ಯೆಗೀಡಾದ ಅಂಕಿತ್ ಸಕ್ಸೇನಾ ಹಾಗೂ ಶೆಹಜಾದಿ ಪರಸ್ಪರ ಪ್ರೀತಿಸುತ್ತಿದ್ದರು. ಅವರ ಸಂಬಂಧವನ್ನು ವಿರೋಧಿಸಿದ ಶೆಹಜಾದಿ ಕುಟುಂಬದ ಮೂವರು ರಾಷ್ಟ್ರ ರಾಜಧಾನಿಯ ಖ್ಯಾಲಾ ಪ್ರದೇಶದಲ್ಲಿ 23 ವರ್ಷದ ಸಕ್ಸೇನಾ ಅವರನ್ನು ಚಾಕುವಿನಿಂದ ಇರಿದು ಹತ್ಯೆಗೈದಿದ್ದರು. 2018ರ ಫೆಬ್ರುವರಿಯಲ್ಲಿ ಈ ಘಟನೆ ನಡೆದಿತ್ತು.

ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 302 (ಕೊಲೆ) ಮತ್ತು 34 (ಸಾಮಾನ್ಯ ಉದ್ದೇಶಕ್ಕಾಗಿ ಹಲವರು ಸೇರಿ ಮಾಡಿದ ಕೃತ್ಯ) ಅಡಿಯಲ್ಲಿ ಆರೋಪ ಹೊರಿಸಲಾಗಿತ್ತು.

ಸೋಮವಾರ(ಇಂದು) ಕೆಲವು ಅಫಿಡವಿಟ್‌ಗಳು ಸಲ್ಲಿಕೆಯಾಗದ ಕಾರಣ ನ್ಯಾಯಾಲಯ ವಿಚಾರಣೆಯನ್ನು ಜನವರಿ 31ಕ್ಕೆ ಮುಂದೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT