ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಹಾರ: ಮತ್ತೊಂದು ಸೇತುವೆ ಕುಸಿತ

Published 27 ಜೂನ್ 2024, 16:29 IST
Last Updated 27 ಜೂನ್ 2024, 16:29 IST
ಅಕ್ಷರ ಗಾತ್ರ

ಕಿಶನ್‌ಗಂಜ್‌: ಬಿಹಾರದ ಕಿಶನ್‌ಗಂಜ್‌ನಲ್ಲಿ ಗುರುವಾರ ಸೇತುವೆಯೊಂದು ಕುಸಿದಿದ್ದು, ರಾಜ್ಯದಲ್ಲಿ ವಾರದೊಳಗೆ ನಡೆದ ನಾಲ್ಕನೇ ಘಟನೆ ಇದಾಗಿದೆ.

‘ಘಟನೆಯಲ್ಲಿ ಯಾವುದೇ ರೀತಿಯ ಪ್ರಾಣಹಾನಿ ಸಂಭವಿಸಿಲ್ಲ’ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್‌ ತುಷಾರ್‌ ಸಿಂಗ್ಲ ತಿಳಿಸಿದರು.

‘70 ಮೀಟರ್‌ ಉದ್ದ ಮತ್ತು 12 ಮೀಟರ್‌ ಅಗಲವಿದ್ದ ಈ ಸೇತುವೆಯನ್ನು 2011ರಲ್ಲಿ ಕಂಕೈ ನದಿಯನ್ನು ಸಂದಿಸುವ ಸಣ್ಣ ಉಪನದಿಗೆ ಅಡ್ಡಲಾಗಿ ನಿರ್ಮಿಸಲಾಗಿತ್ತು. ನೇಪಾಳದಲ್ಲಿ ಭೀಕರ ಮಳೆಯಾದ ಪರಿಣಾಮ ನದಿಯ ನೀರಿನ ಮಟ್ಟ ಏರಿಕೆಯಾಗಿದ್ದು, ನೀರಿನ ರಭಸಕ್ಕೆ ಸೇತುವೆಯ ಆಧಾರಸ್ತಂಭಗಳು ಕುಸಿದಿವೆ’ ಎಂದು ಮಾಹಿತಿ ನೀಡಿದರು.

ಕಳೆದ ವಾರ ಅರಾರಿಯ ಮತ್ತು ಸಿವಾನ್‌ನಲ್ಲಿ ಮೂರು ಸೇತುವೆಗಳು ಕುಸಿದುಬಿದ್ದಿದ್ದವು. ಇತ್ತೀಚಿನ ವರ್ಷಗಳಲ್ಲಿ ಇದೇ ರೀತಿಯ ಹಲವು ಘಟನೆಗಳು ಬಿಹಾರದಲ್ಲಿ ನಡೆದಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT