ಲಖನೌ: ‘ನೈತಿಕ ಗೊಂದಲಗಳಿಂದ, ಸಂಘರ್ಷಗಳಿಂದ ಮತ್ತು ಶಾಂತಿಯೇ ಇಲ್ಲದೆ ಜಗತ್ತು ಹೆಣಗಾಡುತ್ತಿದ್ದರೆ ಭಗವದ್ಗೀತೆ ಗೀತೆಯು ಎಲ್ಲ ಸಮಸ್ಯೆಗಳ ಪರಿಹಾರಕ್ಕೂ ಮಾರ್ಗದರ್ಶನ ನೀಡುತ್ತದೆ. ಗೀತೆಯ ಉಪದೇಶಗಳು ಕಾಲಾತೀತವಾದುವು’ ಎಂದು ಆರ್ಎಸ್ಎಸ್ ಸರಸಂಘಚಾಲಕ ಮೋಹನ್ ಭಾಗವತ್ ಅಭಿಪ್ರಾಯಪಟ್ಟರು.

ಇಲ್ಲಿ ಭಾನುವಾರ ನಡೆದ ‘ಗೀತೆ ಪ್ರೇರಣೆ ಮಹೋತ್ಸವ’ ಕಾರ್ಯಕ್ರಮದಲ್ಲಿ ಮಾತನಾಡಿ, ‘ಗೀತೆಯ 700 ಶ್ಲೋಕಗಳನ್ನು ಓದಿದರೆ ಸಾಲುವುದಿಲ್ಲ. ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

ಕುರುಕ್ಷೇತ್ರದಲ್ಲಿನ ಅರ್ಜುನನ ಸಂದಿಗ್ಧ ಪರಿಸ್ಥಿತಿಯನ್ನು ಮತ್ತು ಇಂದಿನ ಜಗತ್ತಿನ ಸಂದರ್ಭವನ್ನು ಹೋಲಿಸಿ ಮಾತನಾಡಿ, ‘ಇಂದು ಜಗತ್ತು ಅಭಿವೃದ್ಧಿ ಹೊಂದಿದೆ ನಿಜ. ಆದರೂ ಅದು ಎಲ್ಲೋ ಕಳೆದು ಹೋಗಿದೆ, ಅದಕ್ಕೆ ದಿಕ್ಕು ತೋಚದಂತಾಗಿದೆ. ಎಲ್ಲ ಸೌಕರ್ಯಗಳಿವೆ ನಿಜ. ಆದರೆ ಶಾಂತಿ ಇಲ್ಲ, ಸ್ಪಷ್ಟತೆ ಇಲ್ಲ’ ಎಂದು ವಿಶ್ಲೇಷಿಸಿದರು.

‘ಅರ್ಜುನನ ಗೊಂದಲವನ್ನು ಕೃಷ್ಣ ಬಗೆಹರಿಸಿದ ಹಾಗೆಯೇ ಜಗತ್ತು ಇಂದು ಎದರಿಸುತ್ತಿರುವ ಸವಾಲುಗಳನ್ನು ಎದುರಿಸಲು ಗೀತೆಯು ಮಾನವಕುಲಕ್ಕೆ ಸಹಕಾರಿಯಾಗಲಿದೆ. ಸಾವಿರಾರು ವರ್ಷಗಳ ಹಿಂದೆ ಭಾರತದ ಪುರಾತನ ಜ್ಞಾನವು ಜಗತ್ತಿಗೇ ದಿಕ್ಕು ತೋರಿಸಿತ್ತು. ಗೀತೆಯು ಈ ಜ್ಞಾನದ ಸಾರವಾಗಿದೆ’ ಎಂದರು.

ಗೀತೆಯಂತೆ ನಡೆದುಕೊಂಡರೆ ನಮ್ಮ ಬದುಕು ಬದಲಾಗುತ್ತದೆ. ವಿಶ್ವಗುರು ಆಗುವತ್ತ ಭಾರತ ಮುಂದುವರಿಯುತ್ತದೆ
ಮೋಹನ್ ಭಾಗವತ್ ಆರ್ಎಸ್ಎಸ್ ಸರಸಂಘಚಾಲಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.