ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂಸಾಚಾರದಲ್ಲಿ ಕರ್ನಾಟಕ, ರಾಮಮಂದಿರ ಸ್ತಬ್ಧಚಿತ್ರಕ್ಕೆ ಹಾನಿ

Last Updated 29 ಜನವರಿ 2021, 4:12 IST
ಅಕ್ಷರ ಗಾತ್ರ

ನವದೆಹಲಿ: ಗಣರಾಜ್ಯೋ್ವದ ದಿನದಂದು ದೆಹಲಿಯಲ್ಲಿ ನಡೆದ ಹಿಂಸಾಚಾರದಲ್ಲಿ ಕರ್ನಾಟಕದ ಸ್ತಬ್ಧಚಿತ್ರ ಸೇರಿ ವಿವಿಧ ರಾಜ್ಯಗಳ ಸ್ತಬ್ಧಚಿತ್ರಗಳಿಗೆ ಹಾನಿಯಾಗಿದೆ ಎಂದು ತಿಳಿದುಬಂದಿದೆ. ಕೆಂಪುಕೋಟೆಗೆ ನುಗ್ಗಿದ ಪ್ರತಿಭಟನಾಕಾರರು ಸಿಕ್ಕ ಸಿಕ್ಕ ವಸ್ತುಗಳ ಮೇಲೆ ದಾಳಿ ಮಾಡಿದ್ದಾರೆ. ಈ ಸಂದರ್ಭ ಕರ್ನಾಟಕದ ಸ್ತಬ್ದಚಿತ್ರ,ಕ್ಕೆ ಹೆಚ್ಚು ಹಾನಿಯಾಗಿದ್ದು, ಉತ್ತರ ಪ್ರದೇಶದ ರಾಮಮಂದಿರ ಸ್ತಬ್ಧಚಿತ್ರ, ಡಿಆರ್‌ಡಿಓ, ಆಯುಷ್ಮಾನ್ ಭಾರತ್ ಬಹುತೇಕ ಸ್ತಬ್ಧಚಿತ್ರಗಳಿಗೆ ಹಾನಿಯಾಗಿರುವುದಾಗಿ ತಿಳಿದುಬಂದಿದೆ.

ಕೆಂಪುಕೋಟೆ ಹಿಂಸಾಚಾರದಲ್ಲಿ ಸ್ತಬ್ಧಚಿತ್ರಗಳಿಗೆ ಹಾನಿಯಾಗಿರುವ ಸುದ್ದಿಯನ್ನು ಕೇಂದ್ರ ಸಂಸ್ಕೃತಿ ಸಚಿವ ಪ್ರಹ್ಲಾದ್ ಪಟೇಲ್ ಖಚಿತಪಡಿಸಿದ್ದಾರೆ. ಕೆಂಪುಕೋಟೆಯಕೆಲವು ರಚನೆಗಳು ಸಹ ನಾಪತ್ತೆಯಾಗಿವೆ ಎಂದು ಅವರು ತಿಳಿಸಿದ್ದಾರೆ.

‘ಪೆರೇಡ್ ಬಳಿಕ 7 ರಿಂದ 15 ದಿನಗಳವರೆಗೆ ಸಾರ್ವಜನಿಕರಿಗೆ ಸ್ತಬ್ಧಚಿತ್ರಗಳನ್ನು ನೋಡಲು ಅವಕಾಶ ಕಲ್ಪಿಸಲಾಗುತ್ತದೆ. ಹಾಗಾಗಿ, ಎಲ್ಲ ಸ್ತಬ್ಧಚಿತ್ರಗಳನ್ನು ಕೆಂಪುಕೋಟೆ ಒಳಗೆ ಇಡಲಾಗಿತ್ತು. ಹಿಂಸಾಚಾರದ ಬಳಿಕ ನಾನು ಅಲ್ಲಿಗೆ ಹೋದಾಗ, ಅವುಗಳು ಹಾನಿಗೊಳಗಾಗಿದ್ದನ್ನು ನಾನು ನೋಡಿದೆ. ರಾಮ ಮಂದಿರ ಮತ್ತು ಸಂಸ್ಕೃತಿ ಸಚಿವಾಲಯದ ಸ್ತಬ್ಧಚಿತ್ರ ಸೇರಿ ಬಹುತೇಕ ಎಲ್ಲ ಸ್ತಬ್ಧಚಿತ್ರಗಳೂ ಹಾನಿಗೀಡಾಗಿವೆ " ಎಂದು ಪಟೇಲ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

"ಹಿಂಸಾಚಾರದಲ್ಲಿ ಆದ ನಷ್ಟದ ಅಂದಾಜು ಮಾಡಬಹುದಾದರೂ, ಅಮೂಲ್ಯವಾದ ಬೆಲೆ ಕಟ್ಟಲಾಗದ ಪ್ರಾಚೀನ ವಸ್ತುಗಳ ನಷ್ಟದ ಬಗ್ಗೆ ಹೆಚ್ಚು ಚಿಂತಿತನಾಗಿದ್ದೇನೆ. ಇದು ದೊಡ್ಡ ನಷ್ಟವಾಗಿದೆ ಎಂದು ಅವರು ಹೇಳಿದ್ದಾರೆ.

ಹಿಂದಿನ ಸಂಪತ್ತನ್ನು ರಕ್ಷಿಸಲು ಪ್ರಾಚೀನ ಸ್ಮಾರಕಗಳು ಮತ್ತು ಪುರಾತತ್ವ ತಾಣಗಳು ಮತ್ತು ಅವಶೇಷಗಳ ಕಾಯ್ದೆ (ಅಥವಾ AMASR ಕಾಯ್ದೆ) ರೂಪಿಸಲಾಗಿದ್ದು, ತಪ್ಪಿತಸ್ಥರೆಂದು ಕಂಡುಬಂದವರ ವಿರುದ್ಧ ಎಎಎಂಎಸ್ಆರ್ ಕಾಯ್ದೆಯ ಸೆಕ್ಷನ್ 30 ರ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇದಕ್ಕೂ ಮುನ್ನ, ಘಟನೆ ಬಗ್ಗೆ ತನಿಖೆಗೆ ಆದೇಶಿಸಿದ ಸಚಿವ ಪ್ರಹ್ಲಾದ್ ಪಟೇಲ್, ಪುರಾತತ್ವ ಇಲಾಖೆಯಿಂದ ವರದಿ ಕೇಳಿದ್ದಾರೆ.

"ಕೆಂಪು ಕೋಟೆ ಹೊರಗಿನ ದೀಪಗಳು ನಾಶವಾಗಿವೆ, ಮೊದಲ ಮಹಡಿಯ ಮಾಹಿತಿ ಕೇಂದ್ರವು ಹಾನಿಯಾಗಿದೆ. ಧ್ವಜವನ್ನು ಶಾಶ್ವತವಾಗಿ ಪ್ರದರ್ಶಿಸುವ ಸ್ಥಳವು ಅತ್ಯಂತ ಸುರಕ್ಷಿತ ಮತ್ತು ಮಹತ್ವದ ಪ್ರದೇಶವಾಗಿದ್ದು ಅಲ್ಲಿ ಹಿತ್ತಾಳೆಯ ಪ್ರಾಚೀನ ವಸ್ತುಗಳು ಇದ್ದವು, ಅವುಗಳಲ್ಲಿ ಎರಡು ಕಾಣೆಯಾಗಿವೆ" ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT