ನವದೆಹಲಿ: 'ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಸಂದರ್ಭದಲ್ಲಿ ಎಲ್ಲ ಮೂರು ಆಯಾಮಗಳಿಂದಲೂ ಸವಾಲುಗಳನ್ನು ಎದುರಿಸಲು ಸಿದ್ಧರಾಗಿದ್ದೆವು' ಎಂದು ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ತಿಳಿಸಿದ್ದಾರೆ.

ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ಪಾಕಿಸ್ತಾನದ ಮೇಲೆ ಕಳೆದ ವರ್ಷದ ಮೇ 7ರ ಮುಂಜಾನೆ ಭಾರತೀಯ ಸಶಸ್ತ್ರ ಪಡೆಗಳು ಆಪರೇಷನ್ ಸಿಂಧೂರ ಹೆಸರಿನ ಕಾರ್ಯಾಚರಣೆ ನಡೆಸಿತ್ತು. ಈ ವೇಳೆ ಕನಿಷ್ಠ 100 ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿತ್ತು.
.ಭವಿಷ್ಯದ ಯುದ್ಧಗಳಿಗೆ ಭಾರತೀಯ ಸೇನೆ ಸನ್ನದ್ಧ: ಸೇನಾ ಮುಖ್ಯಸ್ಥ ಉಪೇಂದ್ರ ದ್ವಿವೇದಿ.ಮಾಜಿ ಯೋಧರನ್ನು ತೊಡಗಿಸಿಕೊಳ್ಳಲಾಗುತ್ತಿದೆ: ಸೇನಾ ಮುಖ್ಯಸ್ಥ ಉಪೇಂದ್ರ ದ್ವಿವೇದಿ.
ಎದುರಾಳಿಯಿಂದ ಎದುರಾಗುವ ಸವಾಲುಗಳನ್ನು ಎದುರಿಸಲು ಎಲ್ಲ ಮೂರು ಆಯಾಮಗಳಿಂದಲೂ ಸಿದ್ಧರಾಗಿದ್ದೆವು ಎಂದು 'ರೆಡ್ಲೈನ್ಸ್ ರಿಡ್ರಾನ್ - ಆಪರೇಷನ್ ಸಿಂಧೂರ ಅಂಡ್ ಇಂಡಿಯಾಸ್ ನ್ಯೂ ನಾರ್ಮಲ್' ಪುಸ್ತಕ ಬಿಡುಗಡೆ ಸಂದರ್ಭದಲ್ಲಿ ಜನರಲ್ ದ್ವಿವೇದಿ ತಿಳಿಸಿದ್ದಾರೆ.

ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಸಂದರ್ಭದಲ್ಲಿ ಭಾರತ ದೃಢನಿಶ್ಚಯ ಮತ್ತು ಸಂಯಮ ಪ್ರದರ್ಶಿಸಿತ್ತು. ಎಲ್ಲ ಆಯಾಮಗಳಿಂದಲೂ ಎದುರಾದ ಒತ್ತಡವನ್ನು ನಿಭಾಯಿಸುವಲ್ಲಿ ಯಶಸ್ವಿಯಾಗಿತ್ತು.

'ಕಾರ್ಯಾಚರಣೆಯ ಸಂದರ್ಭದಲ್ಲಿ ಹಿನ್ನಡೆಗಳು ಎದುರಾಗಬಹುದು. ಆದರೆ ಎಲ್ಲ ಸವಾಲುಗಳನ್ನು ಎದುರಿಸಲಾಗಿತ್ತು. ನಾನು ಹೆಮ್ಮೆಯಿಂದಲೇ ಹೇಳಬಲ್ಲೆ, ಆಪರೇಷನ್ ಸಿಂಧೂರ ಅತ್ಯಂತ ಯಶಸ್ವಿ ಕಾರ್ಯಾಚರಣೆಯಾಗಿತ್ತು' ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.