ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇನೆಯಿಂದ ತರಬೇತಿ: 18 ವಿದ್ಯಾರ್ಥಿಗಳು ಜೆಇಇ ಮೇನ್ಸ್‌ ಉತ್ತೀರ್ಣ

ಸೇನೆಯ ‘ಪೆಟ್ರೊನೆಂಟ್‌ ಸೂಪರ್‌ 30’ಯಲ್ಲಿ ತರಬೇತಿ
Published 27 ಏಪ್ರಿಲ್ 2024, 15:49 IST
Last Updated 27 ಏಪ್ರಿಲ್ 2024, 15:49 IST
ಅಕ್ಷರ ಗಾತ್ರ

ಜಮ್ಮು: ಜಮ್ಮು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ಸೇನೆಯ ವೈಟ್ ನೈಟ್ ಕೋರ್‌ ನಡೆಸುತ್ತಿರುವ ‘ಪೆಟ್ರೊನೆಂಟ್‌ ಸೂಪರ್‌ 30’ಯಲ್ಲಿ ತರಬೇತಿ ಪಡೆಯುತ್ತಿದ್ದ 18 ವಿದ್ಯಾರ್ಥಿಗಳು ಜೆಇಇ ಮುಖ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಈ ಮೂಲಕ ‘ಪೆಟ್ರೊನೆಂಟ್‌ ಸೂಪರ್‌ 30’ಯ ವಿದ್ಯಾರ್ಥಿಗಳಾಗಿ ಇತಿಹಾಸ ಸೃಷ್ಟಿಸಿದ್ದಾರೆ ಎಂದು ರಕ್ಷಣಾ ಇಲಾಖೆಯ ವಕ್ತಾರರು ತಿಳಿಸಿದ್ದಾರೆ. 

27 ವಿದ್ಯಾರ್ಥಿಗಳ 2ನೇ ಬ್ಯಾಚ್‌ ಜ.27ರಿಂದ ಫೆ.1ರವರೆಗೆ ನಡೆದ ಜೆಇಇ ಮುಖ್ಯ ಪರೀಕ್ಷೆಯ ಮೊದಲ ಹಂತದ ಪರೀಕ್ಷೆಗೆ ಹಾಜರಾಗಿತ್ತು. ಫೆ.13ರಂದು ಫಲಿತಾಂಶ ಪ್ರಕಟಗೊಂಡಿತ್ತು. 27 ವಿದ್ಯಾರ್ಥಿಗಳ ಪೈಕಿ 18 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದರು. 

ಎಲ್ಲಾ 18 ವಿದ್ಯಾರ್ಥಿಗಳಿಗೆ ಕಠಿಣ ತರಬೇತಿ ನೀಡಲಾಯಿತು. ಇದೀಗ ಎಲ್ಲಾ 18 ವಿದ್ಯಾರ್ಥಿಗಳೂ ಜೆಇಇ 2ನೇ ಹಂತದ ಮುಖ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಇತಿಹಾಸ ಸೃಷ್ಟಿಸಿದ್ದಾರೆ. 

ಅರ್ನಿಯಾ ಗ್ರಾಮದ ಆದಿತ್ಯ ಕುಮಾರ್‌ ಶೇ 99.10 ಅಂಕಗಳೊಂದಿಗೆ ಅಗ್ರ ಸ್ಥಾನದಲ್ಲಿದ್ದಾರೆ ಎಂದು ಅವರು ತಿಳಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT