ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಶನಿವಾರ ಹೊಸದಾಗಿ 400 ಕೋವಿಡ್–19 ಪ್ರಕರಣಗಳು ವರದಿಯಾಗಿವೆ. ಆದರೆ, ಕೋವಿಡ್ ದೃಢ ಪ್ರಮಾಣ ಶೇ 0.5ಕ್ಕೆ ಇಳಿದಿದೆ ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದರು.

ಇನ್ನೂ ಒಂದು ವಾರದ ಅವಧಿಗೆ ಕೋವಿಡ್–19 ಪ್ರಕರಣಗಳು ನಿಯಂತ್ರಣದಲ್ಲಿರುವುದು ಕಂಡುಬಂದರೆ, ನಿರ್ಬಂಧಗಳನ್ನು ಮತ್ತಷ್ಟೂ ಸಡಿಲಿಸಲಾಗುವುದು ಎಂದೂ ಅವರು ಹೇಳಿದರು.

ಶುಕ್ರವಾರ ಕೋವಿಡ್‌ನ 523 ಹೊಸ ಪ್ರಕರಣಗಳು ವರದಿಯಾಗಿದ್ದವಲ್ಲದೇ, 50 ಜನರು ಮೃತಪಟ್ಟಿದ್ದರು. ಕೋವಿಡ್ ದೃಢ ಪ್ರಮಾಣ ಶೇ 0.68ರಷ್ಟಿತ್ತು ಎಂದು ಅರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಏಪ್ರಿಲ್ ಕೊನೆಯ ವಾರದಲ್ಲಿ ಕೋವಿಡ್ ದೃಢಪ್ರಮಾಣ ಶೇ 36ರಷ್ಟು ಇದ್ದದ್ದು ಈಗ ಶೇ 1ಕ್ಕಿಂತ ಕಡಿಮೆ ಇದೆ ಎಂದೂ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.